ಶಿಬಿರದ ಮರುದಿನವೇ ಕೆಲಸದಲ್ಲಿ ತೊಡಗಿದ ಯುವಕ

Advertisement

ಸುಳ್ಯ: ಅಡಿಕೆ  ಮರ ಏರುವ ತರಬೇತಿ ಶಿಬಿರದ ಮರುದಿನವೇ ಯುವಕನೊಬ್ಬ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ. ಇದು ಪಂಜದಲ್ಲಿ ನಡೆದ ಅಡಿಕೆ ಮರ ಏರುವ ಶಿಬಿರದ ನಂತರದ ಮೊದಲ ಸುದ್ದಿ.

Advertisement

ಸಹಕಾರಿ ಸಂಘಗಳು ಮುಂಚೂಣಿಯಲ್ಲಿ  ನಿಂತು ಅಡಿಕೆ ಬೆಳೆಗಾರರ ರಕ್ಷಣೆಯ ಕಡೆಗೆ ಹೆಜ್ಜೆ ಇಟ್ಟಿವೆ. ಅಡಿಕೆ ಮರ ಏರುವ ತರಬೇತಿ ಮೂಲಕ ಸ್ವ ಉದ್ಯೋಗ, ಕೃಷಿ ರಕ್ಷಣೆಯ ಕಡೆಗೆ ಮನಸ್ಸು ಮಾಡಿದ್ದಾರೆ.  ಕಳೆದ ಡಿಸೆಂಬರ್ ತಿಂಗಳಲ್ಲಿ  ಕ್ಯಾಂಪ್ಕೋ ನೇತೃತ್ವದಲ್ಲಿ ವಿಟ್ಲ ಸಿಪಿಸಿಆರ್ ಐ ವಠಾರದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ” ಅಡಿಕೆ ಕೌಶಲ್ಯ ಪಡೆ ” ರಚನೆ ಆಗಿತ್ತು. ಅದೇ ಹುಮ್ಮಸ್ಸಿನಲ್ಲಿ ಮತ್ತೊಂದು ಶಿಬಿರ ನಡೆಯಿತು. ಎರಡೂ ಶಿಬಿರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಇಡೀ ಜಿಲ್ಲೆಗೆ, ಅಡಿಕೆ ಬೆಳೆಗಾರರಿಗೆ ಉತ್ತಮ ಸಂದೇಶ ನೀಡಿತು. ಇದರ ಬೆನ್ನಲ್ಲೇ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯಲ್ಲಿ ಇಂತಹ ಶಿಬಿರ ನಡೆಯುವ ಬಗ್ಗೆ ಯೋಚನೆ ಆರಂಭವಾಯಿತು. ಪೆರ್ಲದಲ್ಲಿ  ಸಹಕಾರಿ ಸಂಘದ ಮೂಲಕ  ಶಿ ಬಿರ ನಡೆದರೆ, ಈಗ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗುತ್ತಿಗಾರು ಮತ್ತು ಕಡಬ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಶ್ರಯದಲ್ಲಿ ಶಿಬಿರ ನಡೆದರು ಶುಕ್ರವಾರ ಸಮಾರೋಪಗೊಂಡಿತು.

Advertisement

ಇದರ ಮರುದಿನವೇ ಸುದ್ದಿ ಬಂದಿದೆ, ಶಿಬಿರದಲ್ಲಿ ತರಬೇತಿ ಪಡೆದ ಯುವಕ ಗಣೇಶ್ ಪಣೆಮಜಲು ಎಂಬವರು ತೆಂಗಿನ ಕಾಯಿ ತೆಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಡಬದ ಅವರು ಈ ಹಿಂದೆಯೇ ಮರ ಏರುವ ಬಗ್ಗೆ ತಿಳಿದಿದ್ದರು. ಶಿಬಿರದಲ್ಲಿ ಅನುಭವ ಪಡೆದ ಬಳಿಕ ಇದೀಗ ಮತ್ತೆ ಧೈರ್ಯದಿಂದ ಮರ ಏರುವುದಕ್ಕೆ ಶುರು ಮಾಡಿದ್ದಾರೆ.

ಇದೀಗ ಪ್ರೇರಣೆ ಪಡೆದ ಇನ್ನೂ ಹಲವಾರು ಸಹಕಾರಿ ಸಂಘಗಳೂ ಮುಂದೆ ಬಂದಿವೆ. ಗ್ರಾಮೀಣ ಭಾಗದಲ್ಲಿ ನುರಿತ ಕಾರ್ಮಿಕರ ತಯಾರು ಮಾಡುವುದು  ಹಾಗೂ ಸ್ವ ಉದ್ಯೋಗಕ್ಕೆ ಅವಕಾಶ ನೀಡುವುದು  ಈಗ ಮುಖ್ಯ ಉದ್ದೇಶವಾಗಿದೆ. ಇದೇ ಪ್ರೇರಣೆಯಲ್ಲಿ  ಸುಳ್ಯ ತಾಲೂಕಿನ ವಿವಿಧ ಸಹಕಾರಿ ಸಂಘಗಳು ಆಸಕ್ತಿಯನ್ನು ವಹಿಸಿವೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಶಿಬಿರದ ಮರುದಿನವೇ ಕೆಲಸದಲ್ಲಿ ತೊಡಗಿದ ಯುವಕ"

Leave a comment

Your email address will not be published.


*