ಸುಳ್ಯ:ದಲಿತ ನೇಕಾರರ ಅಭಿವೃದ್ಧಿ ಸಹಕಾರ ಸಂಘ ಶೀಘ್ರದಲ್ಲಿ ಸುಳ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಅಚ್ಚುತ ಮಲ್ಕಜೆ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಯುವಜನತೆಯನ್ನು ನೇಕಾರಿಕೆಯಂತಹ ಸ್ವ ಉದ್ಯೋಗದ ಮೂಲಕ ಸ್ವಾವಲಂಬನೆಯ ಹಾದಿಯಲ್ಲಿ ಸಾಗುವಂತೆ ಮಾಡುವ ಹಾಗೂ ಸಮಾಜದ ಕೆಳಸ್ತರದ ಸಮಾಜವನ್ನ ಸಬಲೀಕರಣ ಮಾಡುದ ಉದ್ದೇಶದಿಂದ ಈ ಸಂಘ ಸ್ಥಾಪನೆಯಾಗಲಿದೆ. ತಾಲೂಕಿನಲ್ಲಿ ಸದ್ಯವೇ ಈ ಸಂಘವು ಆರಂಭವಾಗಲಿದ್ದು ಈ ಸಂದರ್ಭ ಸಮಾಜದ 5 ಮಂದಿ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು. ಸಂಘದ ಬಗ್ಗೆ ಆಸಕ್ತರು ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ತಾಂತ್ರಿಕ ಸಲಹೆಗಾರ ಎ.ಕೆ.ಹಿಮಕರ, ಸರಿಯಾದ ಕಚ್ಚಾವಸ್ತುಗಳ ಕೊರತೆಯಿಂದ ಕಸುಬುಗಳು ಕ್ಷೀಣಿಸುತ್ತಾ ಬರುತ್ತಿದೆ. ಅದಕ್ಕೆ ಅಂತವರಿಗೆ ಪರ್ಯಾಯವಾಗಿ ಅಭಿವೃದ್ಧಿ ಆಧಾರಿತ ಹೊಸ ವೃತ್ತಿ ಕೈಗೊಳ್ಳಲು ಇಂತಹ ಸಹಕಾರಿ ಸಂಘ ನೆರವಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುತ್ರ ಮೊಗ್ರ, ದೇವಪ್ಪ ದೇವ ಉಪಸ್ಥಿತರಿದ್ದ ರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಶೀಘ್ರದಲ್ಲೇ ದಲಿತ ನೇಕಾರರ ಅಭಿವೃದ್ಧಿ ಸಹಕಾರ ಸಂಘ ಅಸ್ತಿತ್ವಕ್ಕೆ"