ಸುಳ್ಯ : ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂ.ಮೀನಾಕ್ಷಿ ಗೌಡ ನೇತೃತ್ವದಲ್ಲಿ 23 ಮಂದಿ ಕಾಶಿ, ಪ್ರಯಾಗ, ಗಯ, ಬೋದಗಯಾ ಇನ್ನಿತರ ಸ್ಥಳಗಳಿಗೆ ಪ್ರವಾಸ ನಡೆಸಿತು.
ಮಂಗಳೂರಿನಿಂದ , ಮುಂಬೈ ಮೂಲಕ ವಾರಣಾಸಿಗೆ ವಿಮಾನ ಪ್ರಯಾಣ ತೆರಳಿ ಅಲ್ಲಿ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿತು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಕಾಲಬೈರವೇಶ್ವರ , ಕಾಶಿ ವಿಶ್ವನಾಥ ದೇವಸ್ಥಾನ, ಕಾಶಿ ವಿಶಾಲಾಕ್ಷಿ, ಹರಿಶ್ಚಂದ್ರ ಘಾಟ್, ಬಿಂದು ಮಾಧವ ದೇವಸ್ಥಾನ, ತುಳಸಿ ಮಾನಸ ಮಂದಿರ, ಸಂಕಟ ಮೋಚನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬಳಿಕ ಗಂಗಾರತಿ ವೀಕ್ಷಿಸಲಾಯಿತು.
ಮರುದಿನ ಪ್ರಯಾಗರಾಜ್ (ಅಲಹಾಬಾದ್)ಗೆ ತೆರಳಿ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಬಡಾ ಹನುಮಾನ್ ದೇವರ ದರ್ಶನ ಮಾಡಲಾಯಿತು.
ಮೂರನೇ ದಿನ ಬಿಹಾರದ ಬುದ್ದಗಯಾಕ್ಕೆ ತೆರಳಿ ಬುದ್ದ ನಿಗೆ ಜ್ಞಾನೋದಯ ಆದ ಪ್ರಸಿದ್ಧ ಸ್ಥಳ ಮಹಾಬೋದಿ ದೇವಸ್ಥಾನ, ಅಶೋಕ ಸ್ತಂಭ, ಬೋದಿವೃಕ್ಷ ಮೊದಲಾದ ಸ್ಥಳವನ್ನು ಸಂದರ್ಶಿಸಲಾಯಿತು. ಅಲ್ಲಿಯೇ ಬಳಿಯಲ್ಲಿದ್ದ 25 ಮೀಟರ್ ಎತ್ತರದ ಮಹಾ ಬುದ್ದನ ವಿಗ್ರಹವನ್ನು ವೀಕ್ಷಿಸಲಾಯಿತು.
ನಾಲ್ಕನೇ ದಿನ ಗಯಾಕ್ಕೆ ತೆರಳಿ ಅಲ್ಲಿ ವಿಷ್ಣುಪಾದ ದೇವಸ್ಥಾನ, ಅಕ್ಷಯ ವಟ, ಸರಯೂ ನದಿಯನ್ನು ದರ್ಶಿಸಲಾಯಿತು. ಗಯಾದಿಂದ ಕಲ್ಕತ್ತಾ ಮತ್ತು ಅಲ್ಲಿಂದ ಬೆಂಗಳೂರಿಗೆ ವಾಯುಯಾನ ಮೂಲಕ ತಲುಪಿ ಆನಂತರ ಬಸ್ಸಿನ ಮೂಲಕ ಸುಳ್ಯಕ್ಕೆ ಹಿಂತಿರುಗಲಾಯಿತು.
ಪ್ರವಾಸಿ ತಂಡದಲ್ಲಿ ಎಂ.ಮೀನಾಕ್ಷಿ ಗೌಡ, ಶೋಭಾ ಚಿದಾನಂದ, ಡಾ|ಹರಪ್ರಸಾದ್ ತುದಿಯಡ್ಕ, ಶಶಿಕಲಾ ಹರಪ್ರಸಾದ್, ಡಾ|ರೇವತಿ ನಂದನ್, ಕೆ.ಬಿ.ರಾಮಚಂದ್ರ, ಭವಾನಿ, ರಘುರಾಮ ಕೆ,ಬಿ., ಪದ್ಮಾವತಿ, ಕುಶಾಲಪ್ಪ ಗೌಡ ಕಾರಿಂಜ, ಪುಷ್ಪಾವತಿ, ದಿನಕರ ಕೆ.ಬಿ., ಶೀಲಾ ದಿನಕರ್, ಎಂ.ವಿ.ಗಿರಿಜಾ, ವೆಂಕಟ್ರಮಣ ಗೌಡ ಹುಲಿಮನೆ, ರಾಜಮ್ಮ, ಡಾ|ವೀಣಾ ವಿಜಯಕುಮಾರ್ ಮೈಸೂರು, ಗೀತಾ ಬೆಂಗಳೂರು, ಅರುಣ ಬೆಂಗಳೂರು, ದಾಮೋದರ ಕುಂದಲ್ಪಾಡಿ, ಲೀಲಾ ದಾಮೋದರ್, ಗಂಗಾಧರ ಮಟ್ಟಿ, ಚಿತ್ರಾ ಮಟ್ಟಿ ಪಾಲ್ಗೊಂಡಿದ್ದರು.
ಕಳೆದ ವರ್ಷ ಈ ತಂಡ ವೈಷ್ಣೋವದೇವಿ, ಅಮೃತಸರ್, ವಾಘಾಬಾರ್ಡರ್ ಪ್ರವಾಸ ಕೈಗೊಂಡಿತ್ತು.