ಸುಳ್ಯ: ಸಂಪಾಜೆ ಸೇರಿದಂತೆ ಘಾಟಿ ಪ್ರದೇಶದಲ್ಲಿ ಹಾಗೂ ಸುಳ್ಯ, ಸಂಪಾಜೆ, ಅರಂತೋಡು ಪರಿಸರದಲ್ಲಿ ಎರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಈ ಕಾರಣದಿಂದ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು ಅರಂಬೂರು ಪ್ರದೇಶದಲ್ಲಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ.
Advertisement
Advertisement
Advertisement
ಸಂಪಾಜೆ ಪ್ರದೇಶದಿಂದ ಮುಂದಿನ ಘಾಟಿ ಪ್ರದೇಶದಲ್ಲಿ ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿದೆ. ಕಳೆದ ಬಾರಿಯ ಜಲಪ್ರಳಯದ ಸಂದರ್ಭ ಕೊಚ್ಚಿ ಹೋದ ಮಣ್ಣು ಈಗಲೂ ನೀರಿನೊಂದಿಗೆ ಮಿಶ್ರವಾಗಿ ಬರುತ್ತಿದೆ. ಮಂಗಳೂರು ಮಡಿಕೇರಿ ರಸ್ತೆಯ ಮದೆನಾಡು ಪ್ರದೇಶದಿಂದ ಆರಂಭವಾಗಿ ಜೋಡುಪಾಲ ಹಾಗೂ ಅದಕ್ಕಿಂತಲೂ ಕಳಗಿನ ಭಾಗದಿಂದಲೇ ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿದೆ. ಹೀಗಾಗಿ ಪಯಸ್ವಿನಿ ನದಿಯಲ್ಲೂ ನೀರು ಉಕ್ಕಿ ಹರಿಯುತ್ತಿದೆ. ಇದೇ ರೀತಿ ನೀರು ಹರಿದರೆ ಸುಳ್ಯ ಮಡಿಕೇರಿ ರಸ್ತೆ ಮುಳುಗಿ ಸಂಚಾರ ಸ್ಥಗಿತವಾಗಬಹುದು ಎಂದು ಸ್ಥಳೀಯರು ಹೇಳುತ್ತಾರೆ.
Advertisement
ಜೋಡುಪಾಲ ಬಳಿ ಹರಿದು ಬರುತ್ತಿರುವ ನೀರು…
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement