ಸತ್ಯ ಸುದ್ದಿಯೇ ಪತ್ರಿಕೆಗೆ ಜೀವಾಳ

July 1, 2019
5:30 PM

ಮಂಗಳೂರು: ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನದಲ್ಲಿ ‘ಪತ್ರಿಕಾ ಮಾಧ್ಯಮ’ದ ಕುರಿತು ಹಿರಿಯ ಪತ್ರಕರ್ತ ಅಳದಂಗಡಿ ಕೃಷ್ಣ ಭಟ್ ಮಾತನಾಡಿ, ನವ ಮಾಧ್ಯಮಗಳ ಸೃಷ್ಟಿಯಾದ ಬಳಿಕ, ಜಗತ್ತಿನ ಸುದ್ದಿಯನ್ನು ಮೊಬೈಲ್ ಮೂಲಕ ವೀಕ್ಷಿಸಲು ಸಾಧ್ಯವಾದ ಆ ನಂತರ ಪತ್ರಿಕಾ ಮಾಧ್ಯಮಕ್ಕೆ ಅವಕಾಶ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಕಳೆದ 15 ವರ್ಷಗಳಿಂದ ನಿರಂತರವಾಗಿ ಪತ್ರಿಕೆಗಳ ಪ್ರಸರಣ ಸಂಖ್ಯೆ ಏರುತ್ತಿರುವುದು ಪತ್ರಿಕಾ ಮಾಧ್ಯಮಗಳಲ್ಲಿ ಇನ್ನಷ್ಟು ಭರವಸೆ ಸೃಷ್ಟಿಯಾಗಲು ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಸತ್ಯ ಮತ್ತು ನೈಜ ಸುದ್ದಿಯನ್ನು ಪತ್ರಿಕೆಗಳು ಜನರಿಗೆ ನೀಡುತ್ತಿರುವುದು ಎಂದು ಅಭಿಪ್ರಾಯಪಟ್ಟರು. ಪತ್ರಕರ್ತನಾದವನು ತನ್ನನ್ನು ಸಾಮಾಜಿಕ ಸಮಸ್ಯೆಗಳಿಗೆ ತೆರೆದುಕೊಳ್ಳುವ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದವರು ಆಶಿಸಿದರು.

Advertisement
Advertisement
Advertisement

ಸಾಮಾಜಿಕ ಕೆಲಸಕ್ಕೆ ನಮ ಮಾಧ್ಯಮ ಬಳಕೆ:
‘ನವ ಮಾಧ್ಯಮ’ ಕುರಿತು ವಿಷಯ ಮಂಡಿಸಿದ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರಸ್ತುತ ಜಗತ್ತಿನ ಹಲವಾರು ಸುದ್ದಿಗಳನ್ನು ತಿಳಿದುಕೊಳ್ಳಲು ನವ ಮಾಧ್ಯಮಗಳು ನೆರವಾಗುತ್ತವೆ. ಜಗತ್ತಿನ ಪ್ರಮುಖ ವ್ಯಕ್ತಿಗಳ ಸಂದೇಶಗಳು, ನಿರ್ಧಾರಗಳು ಕ್ಷಣ ಮಾತ್ರದಲ್ಲಿ ಟ್ವಿಟರ್ ಮುಖಾಂತರ ಸಿಗುತ್ತವೆ ಎಂದಾದರೆ ನವ ಮಾಧ್ಯಮಗಳ ಅಗತ್ಯ ಎಂತಹುದು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಕೆಲಸಗಳನ್ನು ಮಾಡಲು, ಜನರನ್ನು ಒಗ್ಗೂಡಿಸಲು ನವ ಮಾಧ್ಯಮಗಳ ಬಳಕೆ ಹೆಚ್ಚುತ್ತಿದೆ. ಆದರೆ, ಉತ್ತಮ ವಿಚಾರವನ್ನು ಪಸರಿಸಲಷ್ಟೇ ಸಾಮಾಜಿಕ ತಾಣಗಳನ್ನು ಬಳಸಿಕೊಂಡರೆ ಬಹುಶಃ ಈಗಿನ ಯುಗದಲ್ಲಿ ಇದೊಂದು ಅತ್ಯುತ್ತಮ ಮಾಧ್ಯಮವಾಗಿ ರೂಪುತಳೆಯಬಲ್ಲದು ಎಂದು ಅಭಿಪ್ರಾಯಿಸಿದರು.

Advertisement

ಸಮ್ಮೇಳನಾಧ್ಯಕ್ಷರಾದ ಹಿರಿಯ ಪತ್ರಕರ್ತ ಈಶ್ವರ ದೈತೋಟ ಉಪಸ್ಥಿತರಿದ್ದರು. ಪತ್ರಕರ್ತರಾದ ಆತ್ಮಭೂಷಣ್ ಭಟ್ ಸ್ವಾಗತಿಸಿದರು. ಹರೀಶ್ ಮೋಟುಕಾನ ವಂದಿಸಿದರು. ಚೇತನ್ ಪಿಲಿಕುಳ ನಿರೂಪಿಸಿದರು.

 

Advertisement

ದೃಶ್ಯ ಮಾಧ್ಯಮಕ್ಕೆ ಸುವರ್ಣ ಸಂಭ್ರಮ:
ದೃಶ್ಯ ಮಾಧ್ಯಮದ ಆರಂಭ 1959ರಲ್ಲಾಯಿತು. ಈ ವರ್ಷ ದೃಶ್ಯ ಮಾಧ್ಯಮಕ್ಕೆ ಸುವರ್ಣ ಸಂಭ್ರಮ ವರ್ಷ. ಆರಂಭದ ಸುಮಾರು 15 ವರ್ಷ ಕಾಲ ದೃಶ್ಯ ಮಾಧ್ಯಮದ ಪ್ರಭಾವ ಅಷ್ಟೇನು ಇರಲಿಲ್ಲ. ಆದರೆ, ಜಗತ್ತು ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ದೃಶ್ಯ ಮಾಧ್ಯಮಗಳ ಜನಪ್ರಿಯತೆ ಹೆಚ್ಚಾಯಿತು ಎಂದು ಪ್ರೊ| ಜೋಸೆಫಿನ್ ಜೋಸೆಫ್ ಹೇಳಿದರು.

 

Advertisement

ದೇಶೀಯತೆ ಬೆಳೆಸುವಲ್ಲಿ ಆಕಾಶವಾಣಿ :
‘ಆಕಾಶವಾಣಿ’ ಕುರಿತು ವಿಷಯ ಮಂಡಿಸಿದ ಮಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ| ವಸಂತಕುಮಾರ್ ಪೆರ್ಲ, ಆಕಾಶವಾಣಿ ಮಾಧ್ಯಮ 92 ವಸಂತಗಳನ್ನು ಪೂರೈಸಿದ ಹೆಮ್ಮೆಯೊಂದಿಗೆ ಜನರ ಮಾಧ್ಯಮವಾಗಿ ಸಾಗುತ್ತಿದೆ. ಭಾರತದ ಸಂಸ್ಕೃತಿ, ದೇಶೀಯತೆ, ಕಲೆ, ಸಾಹಿತ್ಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳ ಸರ್ವಾಂಗಿಣ ಅಭ್ಯುದಯ-ಪರಿಚಯ ಮಾಡುವ ನಿಟ್ಟಿನಲ್ಲಿ ಆಕಾಶವಾಣಿಯ ಕೊಡುಗೆ ಅಪಾರ ಎಂದು ವಿಶ್ಲೇಷಿಸಿದರು. ಕಲೆ, ಸಂಸ್ಕೃತಿ, ಕೃಷಿ ಪದ್ಧತಿ ಮುಂತಾದವುಗಳನ್ನು ಉಳಿಸುವ ನಿಟ್ಟಿನಲ್ಲಿ ಮಾಧ್ಯಮಗಳಿಗೆ ಬಹುದೊಡ್ಡ ಹೊಣೆಗಾರಿಕೆ ಇದೆ. ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಕಾಶವಾಣಿಯ ಪಾತ್ರ ಹಿರಿದು. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗೂ ಆಕಾಶವಾಣಿ ಮಹತ್ತರ ಕೊಡುಗೆ ನೀಡಿದೆ ಎಂದವರು ಹೇಳಿದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror