ಸಮಯಕ್ಕಿಲ್ಲ ಬ್ರೇಕ್

June 11, 2019
3:00 PM

ಮನೆಯಲ್ಲಿ ಹ್ಯಾಗೆ ಸಮಯ ಕಳೀತೀರಿ ಅತ್ತಿಗೆ ಎಂದು ಪೇಟೆಯಿಂದ ನಮ್ಮಲ್ಲಿಗೆ ಬಂದ ಮಾವನ ಮಗಳ ಪ್ರಶ್ನೆ.  ಏನ್ನನ್ನಲಿ ಗೊತ್ತಾಗಲಿಲ್ಲ. ಅಣ್ಣ ಫೋನ್ ಮಾಡಿ ಏನೇ ಕಾಲ್ ರಿಸೀವ್ ಮಾಡ್ತಾ ಇಲ್ಲ, ಮೆಸೇಜ್ ಗೆ ರಿಪ್ಲೈನೂ ಇಲ್ಲ, ಏನು ಕಥೆ ? ಎಂದು ಕೇಳಿದ್ದಕ್ಕೆ ಸ್ವಲ್ಪ ಬ್ಯುಸಿ ಇದ್ದೆ  ಗೊತ್ತಾಗಲ್ಲಿಲ್ಲ, ಅಂದೆ.  ಹೇಯ್ ತೋಟದ  ಕೆಲಸ ಯಾರು ಮಾಡುವುದು, ನೀನಾ? ಅನ್ನುವುದೇ? ಇಲ್ಲ ಅದಕ್ಕೆ ಬೇರೆ ಜನ ಇದ್ದಾರೆ. ಆ ಕೆಲಸ ನಂಗೆ ಇಲ್ಲ. ಹಮ್ ಮತ್ತೆ  ಆರಾಮಾಗಿ ಇರುವುದು ಬಿಟ್ಟು ಸಮಯ ಇಲ್ಲ ಹೇಳಬಾರಾದಲ್ವಾ?. ಎಂತ ಹೇಳಬೇಕು ಎಂದು ಗೊತ್ತಾಗದೆ  ತಲೆ ತುರಿಸತೊಡಗಿದೆ.

Advertisement
Advertisement
Advertisement
 ನನಗಂತೂ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಹಳ್ಳಿ ಮನೆಗಳಲ್ಲಿ ಕೈ ತುಂಬಾ ಕೆಲಸ ಇದ್ದದ್ದೇ. ಮನೆ ಒಳಗಿನ  ಕೆಲಸ, ದನ ಕರುಗಳ ಉಸ್ತುವಾರಿ, ಕೈ ತೋಟದಲ್ಲಿ ಬೆಳೆಯುವ ಹಣ್ಣು ತರಕಾರಿ ಹೂ ಗಿಡಗಳತ್ತ ಗಮನ, ಊಟ ಕಾಫಿಗೆ ಜನಗಳಿದ್ದರಂತೂ ಕೇಳುವುದೇ ಬೇಡ. ಹೀಗೆ ರಿಲೇ  ಓಡಿದಂತೆ ಪುರುಸೊತ್ತಿಲ್ಲದ ಜೀವನ. ಹೀಗೆ ಪೂರ್ಣ ಪ್ರಮಾಣದಲ್ಲಿ ವ್ಯಸ್ತರಾಗಿರುವುದೂ ಸಂತೋಷವೇ.
ಕೆಲವೊಮ್ಮೆ ಕೆಲಸಗಳು ಒಂದರ ಹಿಂದೊಂದು ಮಾಡುವುದು ಅನಿವಾರ್ಯ. ಆಯಾ ಸಮಯದಲ್ಲಿ ನಡೆಯಬೇಕಾದ್ದನ್ನು ಮಾಡಬೇಕಷ್ಟೆ. ಉದಾಹರಣೆಗೆ  ವೆನಿಲ್ಲಾ ಬೆಳೆಸುವವರು ಬೆಳಗಿನ ಹೊತ್ತೇ ತೋಟಗಳಿಗೆ  ಹೋಗಿ ಹೂವುಗಳ   ಪರಾಗ ಸ್ಪರ್ಶ ಮಾಡಬೇಕು, ಸರಿಯಾದ ಸಮಯದಲ್ಲಿ   ಪರಾಗಸ್ಪರ್ಶ  ಮಾಡಿದರೆ   ಮಾತ್ರವೇ ವೆನಿಲ್ಲಾ ಕೋಡುಗಳು ಉಳಿಯುತ್ತವೆ, ಕೈಗೆ ನಾಲ್ಕು ಕಾಸು ಬರುತ್ತದೆ. ಮಳೆ ಹೆಚ್ಚು ಕಮ್ಮಿಯಾದರೆ ವೆನಿಲ್ಲಾ ಕೋಡು ನೆಲಕ್ಕೆ. ಅಡಿಕೆ ಬೆಳೆಗಾರರ ಕಥೆಯೂ ಬೇರೆಯಲ್ಲಾ. ಕಾಲ ಕಾಲಕ್ಕೆ ಸರಿಯಾಗಿ ಆಗ  ಬೇಕಾದ ಕೆಲಸಗಳನ್ನು ಮಾಡುವ ಅನಿವಾರ್ಯತೆ.  ನುರಿತ ಕೆಲಸಗಾರರ ಕೊರತೆ ಅತಿಯಾಗಿಿದೆ. ಹಾಗಾಾಗಿ ಯಾವುದೇ ಕೆಲಸಗಳನ್ನು ಸಮಯದಲ್ಲಿ ಮಾಡಿ ಮುಗಿಸುವ ನಂಬಿಕೆ ಯಾರಿಗೂ ಇಲ್ಲ. ಮಳೆಗಾಲದ ಆರಂಭಿಕ ಹಂತದಲ್ಲಿ ಮದ್ದು ಬಿಡುವ ಸಂಭ್ರಮ. ಬಿಸಿಲು ಮಳೆಯ ಕಣ್ಣಾಮುಚ್ಚಾಲೆ ಗೆ ರೈತ ಕಂಗಾಲು.
ಯಾರಿಗೂ ಕಾಯದೇ ಮುಂದೆ ಹೋಗುವುದೇ ನನ್ನ ಕೆಲಸ ಎಂದು  ಸಮಯ  ನಡೆಯುತ್ತಲೇ ಇರುತ್ತದೆ ಬ್ರೇಕ್ ಇಲ್ಲದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ನಾಚಿಕೆ ಏತಕೆ?
December 11, 2024
9:57 PM
by: ಡಾ.ಚಂದ್ರಶೇಖರ ದಾಮ್ಲೆ
ವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮ
December 3, 2024
9:17 PM
by: ಡಾ.ಚಂದ್ರಶೇಖರ ದಾಮ್ಲೆ
ಕೊಲ್ಲುವುದಕ್ಕೆ ವ್ಯಕ್ತಿಗಳೆಂದರೆ ಶರೀರಗಳಷ್ಟೇಯಾ..? ಬಂಧುಗಳಲ್ಲವಾ?
November 27, 2024
8:44 PM
by: ಡಾ.ಚಂದ್ರಶೇಖರ ದಾಮ್ಲೆ
ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror