ಗುರುವಾಯೂರು: ಕೇಂದ್ರ ಸರಕಾರಕ್ಕೆ ದೇಶದ ಎಲ್ಲಾ ರಾಜ್ಯಗಳು, ಎಲ್ಲಾ ನಾಗರಿಕರೂ ಸಮಾನರು. ಬಿಜೆಪಿ ಗೆದ್ದರೂ, ಸೋತರೂ ಎಲ್ಲರೂ ನಮಗೆ ಒಂದೇ. ಕೇರಳವನ್ನೂ ವಾರಣಾಸಿಯನ್ನೂ ಸಮಾನ ದೃಷ್ಟಿಯಿಂದ ಕಾಣುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡನೇ ಬಾರಿ ಪ್ರಧಾನಿಯಾದ ಬಳಿಕ ತನ್ನ ಪ್ರಥಮ ಕೇರಳ ಭೇಟಿಯ ಸಂದರ್ಭದಲ್ಲಿ ಗುರುವಾಯೂರಿನಲ್ಲಿ ನಡೆದ ಬಿಜೆಪಿ ವತಿಯಿಂದ ನಡೆದ ಅಭಿನಂದನ್ ಸಮಾರಂಭದಲ್ಲಿ ಮಾತನಾಡಿದರು. ಭೂಮಿಯ ವೈಕುಂಠ ಅಥವಾ ಸ್ವರ್ಗದಂತಿರುವ ಗುರುವಾಯೂರಿಗೆ ಭೇಟಿ ನೀಡಲು ಸಾಧ್ಯವಾಗಿರುವುದು ಹೊಸ ಶಕ್ತಿ ಮತ್ತು ಚೈತನ್ಯ ಪಡೆಯಲು ಸಾಧ್ಯವಾಗಿದೆ. ಗುರುವಾಯೂರು, ಉಡುಪಿ, ದ್ವಾರಕ ಮೊದಲಾದ ಸ್ಥಳಗಳ ಭೇಟಿಯಿಂದ ಹೊಸ ಚೈತನ್ಯ ಲಭಿಸಿದಂತಾಗುತ್ತದೆ ಎಂದು ಅವರು ಬಣ್ಣಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel