ಸರಕಾರದಿಂದ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಕಡೆಗಣನೆ- ಕೋಟ ಶ್ರೀನಿವಾಸ ಪೂಜಾರಿ ಆರೋಪ

May 22, 2019
2:46 PM
Advertisement

ಸುಳ್ಯ: ರಾಜ್ಯದಲ್ಲಿರುವ ನಗರ ಸ್ಥಳೀಯಾಡಳಿತ ಸಂಸ್ಥೆಗಳನ್ನು ರಾಜ್ಯ ಸರಕಾರ ಸಂಪೂರ್ಣ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಯಡಿಯೂರಪ್ಪ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರತಿ ನಗರ ಪಂಚಾಯತ್ ಗಳಿಗೆ ಅಭಿವೃದ್ಧಿಗೆ 5 ಕೋಟಿ ವಿಶೇಷ ಅನುದಾನ ನೀಡಿತ್ತು. ಆದರೆ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಸರಕಾರ ಯಾವುದೇ ಅನುದಾನ ನೀಡದೆ ಕಡೆಗಣಿಸಿದೆ. ಇದು ನಗರಗಳ ಅಭಿವೃದ್ಧಿಗೆ ತೊಡಕಾಗಿದೆ. 109 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎಂಟು ತಿಂಗಳಾದರೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಸಲು ಸರಕಾರ ಕ್ರ‌ಮ ಕೈಗೊಂಡಿಲ್ಲ. ಇದರಿಂದ ರಾಜ್ಯ ಸರಕಾರ ಜೀವಂತವಾಗಿ ಇದೆಯೇ ಎಂಬ ಸಂಶಯ ಮೂಡುತಿದೆ. ನಗರಾಡಳಿತವನ್ನು ನಿರ್ವಹಿಸುವುದರಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.
ಮೈತ್ರಿ ಸರ್ಕಾರ ರೂಪಿಸಿದ್ದಕ್ಕೆ ಕಾಂಗ್ರೆಸ್ ಈಗ ಪಶ್ಚಾತ್ತಾಪ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ಎರಡೂ ಪಕ್ಷಗಳ ನಾಯಕರಲ್ಲಿ ಇರುವ ಅಸಮಾಧಾನದಿಂದ ರಾಜ್ಯ ಸರಕಾರ ಕೆಲವೇ ದಿನದಲ್ಲಿ ಪತನಗೊಳ್ಳಲಿದೆ ಎಂದರು. ರೋಷನ್ ಬೇಗ್ ಬಿಜೆಪಿಗೆ ಬಂದರೆ ನಾವು ಖುಷಿ ಪಡುತ್ತೇವೆ. ರೋಷನ್ ಬೇಗ್ ಪಕ್ಷಕ್ಕೆ ಬರುತ್ತಾರಾ ಎಂಬುದನ್ನು ಅವರು ನಿರ್ಧರಿಸಬೇಕು‌. ಅವರು ಬರುವುದಾದರೆ ಅವರ ಸೇರ್ಪಡೆ ಬಗ್ಗೆ ರಾಜ್ಯ ಬಿಜೆಪಿ ನಿರ್ಧಾರ ಕೈಗೊಳ್ಳುತ್ತದೆ ಎಂದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ : #ModiKiGuarantee ಫುಲ್‌ ಟ್ರೆಂಡ್‌ : ಡಿ.6 ರಂದು INDIA ಮೈತ್ರಿಕೂಟದ ಸಭೆಗೆ ಕಾಂಗ್ರೆಸ್ ಕರೆ
December 3, 2023
1:16 PM
by: The Rural Mirror ಸುದ್ದಿಜಾಲ
ಭೋಪಾಲ್‌ ಅನಿಲ ದುರಂತ : 39 ವರ್ಷ ಕಳೆದರು ಇನ್ನೂ ಮಾಸಿಲ್ಲ ನೆನಪು : ಚುನಾವಣಾ ಫಲಿತಾಂಶದ ಹೊತ್ತಿನಲ್ಲಿ ಸಿಎಂ ಶ್ರದ್ಧಾಂಜಲಿ ಸಲ್ಲಿಕೆ
December 3, 2023
12:36 PM
by: The Rural Mirror ಸುದ್ದಿಜಾಲ
ಪ್ರಯಾಣಿಕರ ಸುರಕ್ಷಾ ದೃಷ್ಟಿಯಿಂದ ಇಂದಿನಿಂದ ಖಾಸಗಿ ಸಾರಿಗೆ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ | ಅಳವಡಿಕೆಗೆ ಎಷ್ಟು ಖರ್ಚಾಗುತ್ತೆ?
December 1, 2023
12:32 PM
by: The Rural Mirror ಸುದ್ದಿಜಾಲ
ಇವರನ್ನು ಬಿಸಿ ಬಿಸಿ ಎಣ್ಣೆಯಲ್ಲಿ ಕರಿದರಷ್ಟೇ ಸಾವಿರ ಸಾವಿರ ಹೆಣ್ಣು ಭ್ರೂಣಗಳಿಗೆ ಸಮಾಧಾನ | ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಿದ ಪಾಪಿಗಳು |
November 28, 2023
1:45 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror