ವೀಕೆಂಡ್ ಬಂದರೆ ಅಬ್ಬಾ….!! ಈ ದಿನ ಮನಸ್ಸು ನಿರಾಳ ಎಂದು ಅಂದುಕೊಳ್ಳುತ್ತಾ ಶಾಪಿಂಗ್ ಗೆ ಹೋಗುವುದು, ಆರಾಮವಾಗಿ ನಿದ್ದೆ ಮಾಡುವುದು , ಟೂರ್ ಟ್ರಿಪ್ ಹೋಗುವುದು, ಮಜಾ ಉಡಾಸಿಕೊಳ್ಳುವ ಯುವಜನತೆಯೆ ಹೆಚ್ಚು. ಆದರೆ ಯುವಬ್ರಿಗೆಡ್ ಹಾಗಲ್ಲ.
ಈ ಯುವಕರ ತಂಡ ರಜೆ, ವೀಕೆಂಡ್ ಬಂದ ತಕ್ಷಣ ಕೈಯಲ್ಲಿ ಒಂದು ಕತ್ತಿ ಹೆಗಲಿಗೊಂದು ಹಾರೆ ಪಿಕ್ಕಾಸು ಹಿಡಿದುಕೊಂಡು ತಮ್ಮ ಸುತ್ತಲಿನ ಪರಿಸರದ ಸ್ವಚ್ಛತಾ ಆಗಿರಬಹುದು, ಬಡವರ ಆಶೋತ್ತರಗಳ ಈಡೇರಿಕೆಗೆ , ಪ್ರಕೃತಿ ವಿಕೋಪಗಳು ಮುಂತಾದ ತೊಂದರೆಗಳಾದಲ್ಲಿ ತಕ್ಷಣ ಧಾವಿಸುತ್ತಾರೆ. ಈ ರೀತಿಯ ಉತ್ತಮವಾದ ಕೆಲಸ ಸುಳ್ಯ ಯುವ ಬ್ರಿಗೇಡ್ ತಂಡ ಮಾಡಿದೆ. ಸುಳ್ಯ ಶಾಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪೂರ್ಣವಾಗಿ ಪೈಂಟಿಗ್ ಮಾಡುವ ಮೂಲಕ ಶಾಲೆಗೆ ಹೊಸ ಹೊಳಪು ನೀಡಿದೆ. ಸುಳ್ಯ ಯುವ ಬ್ರಿಗೇಡ್ ತಂಡವು ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಲೆ ಬಂದಿದೆ.
( ಭಾಸ್ಕರ ಜೋಗಿಬೆಟ್ಟು ಅವರು ಬರೆದ ಬರಹ)
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel