ಸರಣಿ ರಜೆಯಿಂದಾಗಿ ಕುಕ್ಕೆ ಕ್ಷೇತ್ರದಲ್ಲಿ ಭಕ್ತರ ಸಂದಣಿ

April 22, 2019
4:17 AM

ಸುಬ್ರಹ್ಮಣ್ಯ: ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಣಿ ರಜೆಯಿಂದಾಗಿ ಭಕ್ತರ ಸಂದಣಿ ಕಂಡು ಬಂತು. ಕಳೆದ ನಾಲ್ಕು ದಿನದಿಂದ ಭಕ್ತರ ಸಂಖ್ಯೆ ಕಡಿಮೆಯಿದ್ದರೂ ಶನಿವಾರ ಹಾಗೂ ಭಾನುವಾರ ಮಾತ್ರ ಅತ್ಯಧಿಕ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದರು.
ಬುಧವಾರ ಮಹಾವೀರ ಜಯಂತಿ ರಜೆ ಇದ್ದರೂ ಮತ್ತು ಗುರುವಾರ ಮತದಾನ ಇದ್ದುದರಿಂದ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.ಶುಕ್ರವಾರ ಗುಡ್‍ಪ್ರೈಡೆ ರಜೆಯಾದರು ಭಕ್ತರ ಸಂಖ್ಯೆ ಹೆಚ್ಚಿರಲಿಲ್ಲ.ಆದರೆ ಶನಿವಾರ ಏಕಾಏಕಿ ಅತ್ಯಧಿಕ ಪ್ರಮಾಣದಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದರು. ಶನಿವಾರ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ, ಮಹಾಪೂಜೆ, ಆಶ್ಲೇಷ ಬಲಿ ಪೂಜೆ,
ನಾಗಪ್ರತಿಷ್ಠೆ, ಮುಂತಾದ ಸೇವೆಗಳನ್ನು ನೆರವೇರಿಸಿಕೊಂಡರು. ಹೆಚ್ಚಿನ ಸಂಖ್ಯೆಯ ಭಕ್ತರು ಬಂದ ಹಿನ್ನಲೆಯಲ್ಲಿ ದೇಗುಲದ ಒಳಾಂಗಣ, ಹೊರಾಂಗಣ ಹಾಗೂ ರಥಬೀದಿಗಳಲ್ಲಿ ಅಧಿಕ ಜನಸಂದಣಿಯಿತ್ತು. ದೇವಳದ ಹೊರಾಂಗಣದಲ್ಲಿ ಭಕ್ತಾಧಿಗಳು ಮಾರುದ್ದದ ನಾಲ್ಕು ಸರದಿ ಸಾಲಿನಲ್ಲಿ ತೆರಳಿ ದೇವರ ದರುಶನ ಪಡೆದರು. ಆದಿಸುಬ್ರಹ್ಮಣ್ಯ, ಕುಮಾರಧಾರ ಸ್ನಾನಘಟ್ಟದಲ್ಲಿಯು ಕೂಡಾ ಜನದಟ್ಟಣೆ ಕಂಡುಬಂದಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ
March 31, 2026
6:31 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?
March 23, 2026
8:55 PM
by: ಅರುಣ್‌ ಕುಮಾರ್ ಕಾಂಚೋಡು
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ | ಮೌನದ ಹಿಂದೆ ಅಡಗಿರುವ ದರ ಚಲನೆಯ ಸಂಕೇತಗಳು
March 22, 2026
6:19 AM
by: ಅರುಣ್‌ ಕುಮಾರ್ ಕಾಂಚೋಡು
₹5 ಕೂಲಿಯಿಂದ ₹15 ಕೋಟಿ ಕೃಷಿ ಉದ್ಯಮದವರೆಗೆ…! ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದಲ್ಲಿ ಭಾರತೀಯ ರೈತನ ಭಾಷಣ..!
March 20, 2026
8:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror