ಸುಬ್ರಹ್ಮಣ್ಯ: ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಣಿ ರಜೆಯಿಂದಾಗಿ ಭಕ್ತರ ಸಂದಣಿ ಕಂಡು ಬಂತು. ಕಳೆದ ನಾಲ್ಕು ದಿನದಿಂದ ಭಕ್ತರ ಸಂಖ್ಯೆ ಕಡಿಮೆಯಿದ್ದರೂ ಶನಿವಾರ ಹಾಗೂ ಭಾನುವಾರ ಮಾತ್ರ ಅತ್ಯಧಿಕ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದರು.
ಬುಧವಾರ ಮಹಾವೀರ ಜಯಂತಿ ರಜೆ ಇದ್ದರೂ ಮತ್ತು ಗುರುವಾರ ಮತದಾನ ಇದ್ದುದರಿಂದ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.ಶುಕ್ರವಾರ ಗುಡ್‍ಪ್ರೈಡೆ ರಜೆಯಾದರು ಭಕ್ತರ ಸಂಖ್ಯೆ ಹೆಚ್ಚಿರಲಿಲ್ಲ.ಆದರೆ ಶನಿವಾರ ಏಕಾಏಕಿ ಅತ್ಯಧಿಕ ಪ್ರಮಾಣದಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದರು. ಶನಿವಾರ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ, ಮಹಾಪೂಜೆ, ಆಶ್ಲೇಷ ಬಲಿ ಪೂಜೆ,
ನಾಗಪ್ರತಿಷ್ಠೆ, ಮುಂತಾದ ಸೇವೆಗಳನ್ನು ನೆರವೇರಿಸಿಕೊಂಡರು. ಹೆಚ್ಚಿನ ಸಂಖ್ಯೆಯ ಭಕ್ತರು ಬಂದ ಹಿನ್ನಲೆಯಲ್ಲಿ ದೇಗುಲದ ಒಳಾಂಗಣ, ಹೊರಾಂಗಣ ಹಾಗೂ ರಥಬೀದಿಗಳಲ್ಲಿ ಅಧಿಕ ಜನಸಂದಣಿಯಿತ್ತು. ದೇವಳದ ಹೊರಾಂಗಣದಲ್ಲಿ ಭಕ್ತಾಧಿಗಳು ಮಾರುದ್ದದ ನಾಲ್ಕು ಸರದಿ ಸಾಲಿನಲ್ಲಿ ತೆರಳಿ ದೇವರ ದರುಶನ ಪಡೆದರು. ಆದಿಸುಬ್ರಹ್ಮಣ್ಯ, ಕುಮಾರಧಾರ ಸ್ನಾನಘಟ್ಟದಲ್ಲಿಯು ಕೂಡಾ ಜನದಟ್ಟಣೆ ಕಂಡುಬಂದಿತ್ತು.
ಸರಣಿ ರಜೆಯಿಂದಾಗಿ ಕುಕ್ಕೆ ಕ್ಷೇತ್ರದಲ್ಲಿ ಭಕ್ತರ ಸಂದಣಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Be the first to comment on "ಸರಣಿ ರಜೆಯಿಂದಾಗಿ ಕುಕ್ಕೆ ಕ್ಷೇತ್ರದಲ್ಲಿ ಭಕ್ತರ ಸಂದಣಿ"