ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಗಳ ಅಭಿಯಾನ : ಅಂತರ್ಜಲ ಅಭಿವೃದ್ಧಿಗೆ ಪಣತೊಟ್ಟ ಯುವಕ ಮಂಡಲ ಸದಸ್ಯರು

Advertisement
ಸವಣೂರು: ತೀವ್ರವಾಗಿ ಕುಸಿಯುತ್ತಿರುವ ಅಂತರ್ಜಲದಿಂದಾಗಿ ಕುಡಿಯುವ ನೀರು ಹಾಗೂ ಕೃಷಿಗಾಗಿ ಬಳಸಲಾಗುತ್ತಿರುವ ಕೊಳವೆ ಬಾವಿಗಳು ಹಾಗು ಕೆರೆಗಳು ಬತ್ತುತ್ತಿರುವ ಅಪಾಯಕಾರಿ ಬೆಳವಣಿಗೆ ಮನಗಂಡು ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು  ಜಲತಜ್ಞ ಹಾಗೂ ಉಪನ್ಯಾಸಕರಾದ ಶ್ರೀಶಕುಮಾರ್ ಅವರ ಮಾರ್ಗದರ್ಶನ ಪಡೆದು ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಗೆ ಜನಜಾಗೃತಿ ಹಾಗು ವಿವಿಧ ಯೋಜನೆಗಳನ್ನು ರೂಪಿಸಿದ್ದು ಅವುಗಳ  ಅನುಷ್ಠಾನಕ್ಕೆ ಮುಂದಾಗಿದ್ದಾರೆ.
ಯುವಕ ಮಂಡಲದ ಅಧ್ಯಕ್ಷರ ಮನೆಯಿಂದ ಚಾಲನೆ :
ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು ಅವರ ಮನೆಯಲ್ಲಿ ಮಳೆ ನೀರಿಂಗಿಸಲು ಬೃಹತ್ ಹೊಂಡ ನಿರ್ಮಿಸುವ ಮೂಲಕ ಯುವಕ ಮಂಡಲದ ಅಂತರ್ಜಲ ಅಭಿವೃದ್ಧಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸುತ್ತ ಮುತ್ತಲಿನ ಗುಡ್ಡಗಳ ಹಾಗು ತಮ್ಮ ಜಮೀನಿನಲ್ಲಿ ಸುರಿದ ನೀರನ್ನು ವ್ಯರ್ಥವಾಗಿ ಹರಿದು ಹೋಗದಂತೆ ತಡೆದು ಭೂಮಿಗೆ ಇಂಗಿಸಿ ಅಂತರ್ಜಲ ಅಭಿವೃದ್ಧಿಗೆ ಪ್ರಯತ್ನಿಸುವ ಉದ್ದೇಶದಿಂದ ಯುವಕ ಮಂಡಲದ ಅಭಿಯಾನದ ಭಾಗವಾಗಿ ಮೊದಲ ಯೋಜನೆಯನ್ನು ನಮ್ಮ ಜಮೀನಿನಲ್ಲಿ ಅನುಷ್ಠಾನ ಮಾಡಿದ್ದೇವೆ ಎಂದು ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು ಹೇಳಿದರು.
ವಿಪರೀತ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಜನರು  ಜಲಸಂರಕ್ಷಣೆಯತ್ತ ಚಿತ್ತ ನೆಡಬೇಕಿದೆ. ನೀರಿಂಗಿಸುವಿಕೆ ಮಹತ್ವದ  ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಯುವಕ ಮಂಡಲದ ವತಿಯಿಂದ ಆಯೋಜಿಸಲಿದ್ದೇವೆ ಎಂದು ಕಾರ್ಯಕ್ರಮ ಸಂಯೋಜಕ, ಯುವಕ ಮಂಡಲದ ಖಜಾಂಚಿ  ನಾಗೇಶ್ ಪಟ್ಟೆಮಜಲು ತಿಳಿಸಿದರು.
ಅಭಿಯಾನದ ಅಂಗವಾಗಿ ಯುವಕ ಮಂಡಲದ ಸದಸ್ಯರ ಹಾಗೂ ಆಸಕ್ತ ಗ್ರಾಮಸ್ಥರ ಜಮೀನುಗಳಲ್ಲಿ ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಉದ್ದೇಶವನ್ನು  ಯುವಕ ಮಂಡಲ ಹೊಂದಿದೆ.
ಯುವಕ ಮಂಡಲದ ಗೌರವಾಧ್ಯಕ್ಷರಾದ ಮುಂಡೂರು ಗ್ರಾಮ ಪಂ ಅಧ್ಯಕ್ಷ ವಸಂತ ಎಸ್ ಡಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಬ್ರಹ್ಮಣ್ಯ ಕರಂಬಾರು, ಎಸ್ ಜಿ ಎಂ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀನಿವಾಸ್ ಎಚ್ ಬಿ, ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ರಾಜೇಶ್ ಎಸ್ ಡಿ, ಪದಾಧಿಕಾರಿಗಳಾದ ನಾಗೇಶ್ ಪಟ್ಟೆಮಜಲು, ಹರೀಶ್ ಆಲೇಕಿ, ಅಶೋಕ್ ಎಸ್ ಡಿ ಸದಸ್ಯರಾದ ವಸಂತ ಪೂಜಾರಿ ಕೈಪಂಗಳದೋಳ,  ಲೋಕೇಶ್ ಗೌಡ ಎಂ, ಕೃಷ್ಣಪ್ಪ ಪಟ್ಟೆಮಜಲು, ಶರತ್ ಸರ್ವೆದೋಳಗುತ್ತು, ಸ್ಥಳೀಯರಾದ ಪೂವಪ್ಪ, ಸುರೇಶ ಮೊದಲಾದವರು ಉಪಸ್ಥಿತರಿದ್ದರು.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಗಳ ಅಭಿಯಾನ : ಅಂತರ್ಜಲ ಅಭಿವೃದ್ಧಿಗೆ ಪಣತೊಟ್ಟ ಯುವಕ ಮಂಡಲ ಸದಸ್ಯರು"

Leave a comment

Your email address will not be published.


*