ಸವಣೂರು : ಸವಣೂರು ಆದರ್ಶ ಸ್ತ್ರೀ ಶಕ್ತಿ ಗೊಂಚಲು ಸಭೆ ಹಾಗೂ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮವು ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಿತು.
ಶಿಶು ಅಭಿವೃದ್ದಿ ಇಲಾಖೆಯ ಪುತ್ತೂರು ತಾಲೂಕು ಮೇಲ್ವಿಚಾರಕಿ ಸುಜಾತ ಅವರು ಕಾರ್ಯಕ್ರಮ ಉದ್ಘಾಟಿಸಿ ,ಇಲಾಖೆಯ ಯೋಜನೆ ಹಾಗೂ ಪೌಷ್ಟಿಕ ಆಹಾರ ಸಪ್ತಾಹದ ಕುರಿತು ಮಾತನಾಡಿದರು.ಸಭೆಯಲ್ಲಿ ಆದರ್ಶ ಸ್ತ್ರೀ ಶಕ್ತಿ ಗೊಂಚಲು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯಶೋಧಾ,ಉಪಾಧ್ಯಕ್ಷರಾಗಿ ಕುಮಾರಿ,ಕಾರ್ಯದರ್ಶಿಯಾಗಿ ಗೀತಾ,ಜತೆ ಕಾರ್ಯದರ್ಶಿಯಾಗಿ ಆಸ್ಮಾನ್,ಕೋಶಾಧಿಕಾರಿಯಾಗಿ ಗೀತಾ,ಗೊಂಚಲಿನ ಪ್ರತಿನಿಧಿಯಾಗಿ ನಿವೇದಿತಾ ಅವರನ್ನು ಆಯ್ಕೆ ಮಾಡಲಾಯಿತು.
ಸವಣೂರು ಸ.ಉ.ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ,ಸವಣೂರು ಅಂಗನವಾಡಿ ಕಾರ್ಯಕರ್ತೆ ಮಮತಾ ಜಿ.ಬಿ,ಪಣೆಮಜಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಿಜಯ ಈಶ್ವರ ಗೌಡ ಕಾಯರ್ಗ,ಆರೇಲ್ತಡಿ ಅಂಗನವಾಡಿ ಕಾರ್ಯಕರ್ತೆ ಮಮತಾ,ಪೆರಿಯಡ್ಕ ಅಂಗನವಾಡಿ ಕಾರ್ಯಕರ್ತೆ ಕಾವ್ಯಾ ಉಪಸ್ಥಿತರಿದ್ದರು.
ಯಶೋಧಾ ನವೀನ್ ಕಾರ್ಯಕ್ರಮ ನಿರೂಪಿಸಿದರು.