ಸುಳ್ಯ: ಪ್ರತಿಯೊಬ್ಬ ವಿಧ್ಯಾರ್ಥಿಯು ತನ್ನ ವಿಧ್ಯಾರ್ಥಿ ಜೀವನದಲ್ಲಿ ಜ್ಞಾನ ದಾಹ, ಕಠಿಣ ಪರಿಶ್ರಮ, ಬದ್ಧತೆ ಹಾಗು ಸೌಜನ್ಯತೆಯನ್ನು ಅಳವಡಿಸಿಕೊಂಡರೆ ಯೋಗ್ಯ ಸತ್ಪ್ರಜೆ ಹಾಗು ಉನ್ನತ ಸ್ಥಾನವನ್ನು ಗಳಿಸಲು ಸಾದ್ಯವಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್.ಗಂಗಾಧರ ಹೇಳಿದರು.
ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಸಾಧನಾ ಶೃಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಈ ಕಾರ್ಯಕ್ರಮವು ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲು ಪ್ರತಿ ತಿಂಗಳು ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ರಾಷ್ತ್ರ ಹಾಗು ರಾಜ್ಯ ಪ್ರಶಸ್ತಿ ಪಡೆದ ಗಣ್ಯರನ್ನು ಕರೆಸಲಾಗುವುದು ಎಂದು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪುರುಷೊತ್ತಮ ಕಜೆ ಕೆ. ಆರ್ ಗಂಗಾಧರ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು, ಪೂರ್ವ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಮಾವಿನಕಟ್ಟೆ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಶೇಖರ, ಭೋಜಪ್ಪ ಗೌಡ, ಭರತ್, ಪವಿತ್ರ ಸುಳ್ಳಿ ಮತ್ತು ಲಿಂಗಪ್ಪ ಮಾಸ್ತರ್ ಉಪಸ್ಥತರಿದ್ದರು.
ಶಿಕ್ಷಕರಾದ ಗೋಪಿನಾಥ ಮೆತ್ತಡ್ಕ ಸ್ವಾಗತಿಸಿ, ಮುರಳೀಧರ ವಂದಿಸಿದರು. ಶಿಕ್ಷಕರಾದ ವಸಂತ್ ನಾಯಕ್, ತಿರುಮಲೇಶ್ವರಿ, ವಿರೂಪಾಕ್ಷಪ್ಪ, ಸುಂದರ, ರಾಜೆಶ್ವರಿ, ಶಶಿಕಲಾ ಹಾಗು ವಿಜೇತ್ ಸಹಕರಿಸಿದರು.