ಸಾಲಮನ್ನಾ ಅನುಷ್ಟಾನದಲ್ಲಿ ವೈಫಲ್ಯ: ಅರಂತೋಡು ಸಹಕಾರಿ ಸಂಘದ ಮುಂದೆ ರೈತ ಸಂಘದಿಂದ ಪ್ರತಿಭಟನೆ

October 31, 2019
2:58 PM

ಸುಳ್ಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಳ್ಯ ತಾಲೂಕು  ಘಟಕದ  ವತಿಯಿಂದ ಸಾಲಮನ್ನಾ ಅನುಷ್ಟಾನ ವೈಪಲ್ಯದ ವಿರುದ್ಧ ಹೋರಾಟ ಹಮ್ಮಿಕೊಂಡಿದೆ. ಅರಂತೋಡು ಸಹಕಾರಿ ಸಂಘದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ  ಸಮರ್ಪಕ ಉತ್ತರ ಸಿಗದ ಕಾರಣ ಸೂಕ್ತ ಭರವಸೆ ದೊರೆಯುವ ತನಕ ಅಹೋರಾತ್ರಿ ಧರಣಿ ಮುಂದುವರಿಸುವ ನಿರ್ಣಯ ಕೈಗೊಳ್ಳಲಾಗಿದೆ.

Advertisement
Advertisement
Advertisement
Advertisement

Advertisement

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಹಮ್ಮಿಕೊಂಡ ಸಾಲಮನ್ನಾ ವಿಚಾರವಾಗಿ ಪ್ರತಿಭಟನೆ ಅರಂತೋಡು ಸಹಕಾರಿ ಸಂಘ ಎದುರು ಪ್ರತಿಭಟನೆ ನಡೆಯುತ್ತಿದೆ. ಆದರೆ ವಲಯ ಸಹಕಾರಿ ಸೂಪರ್ವೈಸರ್ ಬಾಲಕೃಷ್ಣ ಅವರು ಕೊಟ್ಟ ಭರವಸೆ ಗೆ ರೈತರು ಒಪ್ಪದೇ ಜಿಲ್ಲಾ ರೆಜಿಸ್ಟ್ರಾರ್ ಅವರೇ ಬಂದು ಸೂಕ್ತ ಭರವಸೆ ನೀಡುವ ತನಕ ಅಹೋರಾತ್ರಿ ಧರಣಿ ಮಾಡುವುದೆಂದು ತೀರ್ಮಾನಿಸಿದ್ದಾರೆ .

ಪ್ರತಿಭಟನೆಯಲ್ಲಿ ರೈತ ಸಂಘ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಅವರ ಮುಂದಾಳತ್ವ ವಹಿಸಿದ್ದಾರೆ .ರೈತಸಂಘ ಸುಳ್ಯ ತಾಲುಕ್ ಘಟಕದ ಅಧ್ಯಕ್ಷ ಲೊಲಜಾಕ್ಷ ಭೂತಕಲ್ಲು ,ಪ್ರಧಾನ ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು ,ಜಿಲ್ಲಾ ಕಾರ್ಯದರ್ಶಿ ದಿವಾಕರ ಪೈ ಮಜಿಗುಂಡಿ ,ಖಜಾಂಜಿ ದೇವಪ್ಪ ಕುಂಡಲಪಾಡಿ ,ಅರಂತೋಡು ವಲಯ ಅದ್ಯಕ್ಷ ತೀರ್ಥರಾಮ ಉಳುವಾರು ,ಕಾರ್ಯದರ್ಶಿ ಮೋಹನ್ ಅಡ್ತಲೆ ಮತ್ತು ಅರಂತೋಡು ,ಅಲೆಟ್ಟಿ ,ಉಬರಡ್ಕ,ಮಡಪ್ಪಾಡಿ ಜಾಲ್ಸೂರ್ ,ಅಜ್ಜಾವರ ಮುಂತಾದ ಗ್ರಾಮಗಳ ರೈತರು ಭಾಗವಹಿಸಿದ್ದಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror