ಪುತ್ತೂರು: 2020ನೇ ಸಾಲಿನ ಸಿಇಟಿಯಲ್ಲಿ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಮೊದಲ 200ರಲ್ಲಿ 6 ರ್ಯಾಂಕ್ಗಳನ್ನು ಗಳಿಸುವುದರೊಂದಿಗೆ ಮೊದಲ 500ರಲ್ಲಿ 8 ರ್ಯಾಂಕ್ಗಳು ಹಾಗೂ ಮೊದಲ 1000ದಲ್ಲಿ 14 ರ್ಯಾಂಕ್ಗಳನ್ನು ಪಡೆದುಕೊಂಡಿರುತ್ತಾರೆ.
ಅಗ್ರಿ ಬಿ.ಎಸ್ಸಿ. ವಿಭಾಗದಲ್ಲಿ ಶ್ರೀಹರಿ 145ನೇ ರ್ಯಾಂಕ್ (ಇಂಜಿನಿಯರಿಂಗ್ 730ನೇ ರ್ಯಾಂಕ್) ಗಳಿಸಿ ವಿದ್ಯಾಲಯಕ್ಕೆ ಪ್ರಥಮ ಸ್ಥಾನಿಯಾಗಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ನದೀಮ್ ಡಿ.ಕೆ. 357ನೇ ರ್ಯಾಂಕ್ (ಅಗ್ರಿ ಬಿ.ಎಸ್ಸಿ. 163ನೇ ರ್ಯಾಂಕ್) ಪಡೆದು ಟಾಪರ್ ಎನಿಸಿಕೊಂಡಿದ್ದಾನೆ. ವಿದ್ಯಾರ್ಥಿಗಳಾದ ಶ್ರೀಜಿತ್ ಎಮ್ (ಅಗ್ರಿ ಬಿ.ಎಸ್ಸಿ. 158ನೇ ರ್ಯಾಂಕ್, ಇಂಜಿನಿಯರಿಂಗ್ 455ನೇ ರ್ಯಾಂಕ್), ಸಮರ್ಥ್ ಕುಮಾರ್ ಶೆಟ್ಟಿ (ಇಂಜಿನಿಯರಿಂಗ್ 697ನೇ ರ್ಯಾಂಕ್), ಆದರ್ಶ್ ಎಂ. (ಅಗ್ರಿ ಬಿ.ಎಸ್ಸಿ. 796ನೇ ರ್ಯಾಂಕ್) ಹಾಗೂ ದೀಕ್ಷಾ ಡಿ.ಎಸ್. (ಅಗ್ರಿ ಬಿ.ಎಸ್ಸಿ. 868ನೇ ರ್ಯಾಂಕ್) ವಿದ್ಯಾಲಯದ ಇತರ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಸಂಚಾಲಕರು, ಆಡಳಿತ ಮಂಡಳಿ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.