ಕಡಬ : ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟ ಭಾನುವಾರ ಬೆಂಕಿ ಆಕಸ್ಮಿಕದಿಂದ ಸಾವಿರಾರು ರಬ್ಬರ್ ಗಿಡಗಳು ಬೆಂಕಿಗೆ ಆಹುತಿಯಾಯಿತು. ಮಧ್ಯಾಹ್ನದ ಹೊತ್ತಿಗೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿತು.
ಈ ಹಿಂದೆಯೂ ಇದೇ ರೀತಿ ಬೆಂಕಿ ಆಕಸ್ಮಿಕವಾಗಿತ್ತು. ಆ ಸಂದರ್ಭ ಸ್ಥಳೀಯರು ಬೆಂಕಿ ಹರಸಾಹಸ ಪಟ್ಟರು. ಆದರೆ ಬೆಂಕಿ ನಂದಿಸುವ ಕಾರ್ಯಾಚರಣೆಯ ವೇಳೆ ಜನರು ತೋಟದ ಬೇಲಿಯನ್ನು ಹಾನಿಗೊಳಿಸಿದ್ದಾರೆ ಎಂದು ನಿಗಮದ ಅಧಿಕಾರಿಗಳು ಜನರ ಮೇಲೆ ಆರೋಪ ಹೊರಿಸಿದ ಕಾರಣದಿಂದಾಗಿ ಈ ಬಾರಿ ಸ್ಥಳೀಯರು ಬೆಂಕಿ ನಂದಿಸಲು ಹೆಚ್ಚಿನ ಮುತುವರ್ಜಿ ತೋರಿಸಲಿಲ್ಲ ಎನ್ನಲಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಂಕದಕಟ್ಟೆಯಲ್ಲಿ ರಬ್ಬರ್ ತೋಟಕ್ಕೆ ಬೆಂಕಿ"