ಸುಬ್ರಹ್ಮಣ್ಯದ ಆನೆ ಯಶಸ್ವಿಯ ಆರೋಗ್ಯ ಸುಧಾರಣೆಗೆ ಉರುಳು ಸೇವೆ ಮಾಡಿದ ಗ್ರಾ ಪಂ ಸದಸ್ಯ…!

August 16, 2019
9:30 AM

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಆನೆ ಯಶಸ್ವಿ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಯಶಸ್ವಿಯ ತುಂಟಾಟ, ನಡೆದಾಟ ಎಲ್ಲವೂ ಭಕ್ತರಿಗೆ ಖುಷಿ. ಹೀಗಾಗಿ ಅದು ಪ್ರೀತಿಯ ಯಶಸ್ವಿ. ಇದೀಗ ಈ ಆನೆಗೆ ಅನಾರೋಗ್ಯ ಕಾಡಿದಾಗ ಎಲ್ಲರಿಗೂ ನೋವು. ತಮಗೆ , ತಮ್ಮ ಕುಟುಂಬಕ್ಕೆ ನೋವಾದಷ್ಟೇ ಸಂಕಟವಾಗುತ್ತಿದೆ. ಹೀಗಾಗಿ ಆನೆಯ ಆರೋಗ್ಯ ವಿಚಾರಣೆಗೆ ಭಕ್ತರು ಬಂದರೆ ಕುಕ್ಕೆ ದೇವಸ್ಥಾನದ ಭಕ್ತ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಯಶಸ್ವಿಯ ಆರೋಗ್ಯ ಸುಧಾರಣೆಗೆ ಉರುಳು ಸೇವೆ ನಡೆಸಿದರು.

ಕುಕ್ಕೆ ದೇವಸ್ಥಾನದ ಆನೆ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಆನೆಯ ಆರೋಗ್ಯ ಸುಧಾರಿಸಲೆಂದು ಪ್ರಾರ್ಥಿಸಿ ಕುಕ್ಕೆ ದೇವಸ್ಥಾನದ ಭಕ್ತ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಗುರುವಾರ ಬೆಳಗ್ಗೆ ದೇಗುಲದ ಹೊರಾಂಗಣದಲ್ಲಿ ಉರುಳು ಸೇವೆ ನಡೆಸಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಈ ಮರಿಯಾನೆ ಯಶಸ್ವಿಯನ್ನು  ಉದ್ಯಮಿ, ಶಾಸಕ ಆನಂದ ಸಿಂಗ್ ಸೇವಾ ರೂಪದಲ್ಲಿ ನೀಡಿದ್ದರು. ಅಂದಿನಿಂದಲೇ ಭಕ್ತರೆಲ್ಲರಿಗೂ ಯಶಸ್ವಿ ಪ್ರೀತಿಯ ಆನೆಯಾಗಿದೆ. ಆನೆಯ ತುಂಟಾಟ, ನಡೆಯುವ ರೀತಿ ಎಲ್ಲವೂ ಖುಷಿ. ಹೀಗಾಗಿ ಭಕ್ತರೆಲ್ಲರೂ ಅನಾರೋಗ್ಯದಿಂದ ಬಳಲುತ್ತಿರುವ ಆನೆಯ ಆರೋಗ್ಯ ವಿಚಾರಿಸಲು ಆನೆಯ ಅಭಿಮಾನಿಗಳು ಶೆಡ್‍ನತ್ತ ತೆರಳುತಿದ್ದಾರೆ. ಶೀಘ್ರವೇ ಗುಣಮುಖಗೊಂಡು ಎಂದಿನಂತೆ ಇರುವಂತಾಗಲೆಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror