ಸುಬ್ರಹ್ಮಣ್ಯ ವಿವಾದ : ಸ್ಥಳೀಯ ವಿಹಿಂಪ ಮುಖಂಡರು ಗೈರು ಏಕೆ ?

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಂದರ್ಭ ಜಿಲ್ಲೆಯಿಂದ ವಿಹಿಂಪ ಮುಖಂಡರು ಹಾಗೂ ಬಜರಂಗದಳ ಮುಖಂಡರು ಆಗಮಿಸಿದರೂ ಸ್ಥಳೀಯ ವಿಹಿಂಪ ಮುಖಂಡರು  ಹಾಗೂ ಸುಳ್ಯ ತಾಲೂಕಿನ ವಿಹಿಂಪ ಮುಖಂಡರೂ ಸಭೆಯಲ್ಲಿ  ಇರಲಿಲ್ಲ.  ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನನದ ಆಡಳಿತವನ್ನೂ ಸಂಘಪರಿವಾರ ವಹಿಸಿಕೊಂಡಿತ್ತು. ಆಗಲೂ ಸರ್ಪಸಂಸ್ಕಾರ ಸೇರಿದಂತೆ ವಿವಿಧ ಚರ್ಚೆಗಳು ನಡೆಯುತ್ತಿತ್ತು. ಇದೀಗ ಹಿಂದೂ ಸಮಾಜದ ಪ್ರಮುಖ ಹಾಗೂ ಪ್ರಭಾವಿ ಸ್ವಾಮೀಜಿಗಳಾದ  ಪೇಜಾವರ ಶ್ರೀಗಳು ಆಗಮಿಸಿದ ಸಂದರ್ಭ ಈ ಹಿಂದಿನ ಆಡಳಿತ ಸಮಿತಿ ಸದಸ್ಯ ಕಿಶೋರ್ ಶಿರಾಡಿ ಹೊರತುಪಡಿಸಿ ಉಳಿದ ಯಾರೊಬ್ಬರೂ ಕಂಡುಬಂದಿರಲಿಲ್ಲ. ಈ ಬಗ್ಗೆ ತಾಲೂಕಿನ ವಿಹಿಂಪ ಮುಖಂಡರು ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯ ವಿಹಿಂಪ ಮುಖಂಡರೂ ಸಭೆಯಲ್ಲಿ ಕಾಣಿಸಲಿಲ್ಲ.

Advertisement

ಈ ಹಿಂದೆ ದೇವಸ್ಥಾನದ ಪರವಾಗಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿ ಅವರನ್ನು ಬಿಜೆಪಿಯ  ಹಾಗೂ ಸಂಘಪರಿವಾರದ ಎಲ್ಲಾ ಹುದ್ದೆಯಿಂದ ವಜಾ ಮಾಡಲಾಗಿತ್ತು.  ದೇವಸ್ಥಾನ ಹಾಗೂ ಮಠ ಎರಡೂ ಸಮಾಜ ಎಂದು ಸಂಘ ಪರಿವಾರ ಸೂಚಿಸಿದ ಹಿನ್ನೆಲೆಯಲ್ಲಿ  ಕಿಶೋರ್ ಶಿರಾಡಿ ಅವರ ಹುದ್ದೆಯಿಂದ ವಜಾ ಮಾಡಲಾಗಿತ್ತು. ಆದರೆ ವಿಶ್ವ ಹಿಂದೂ ಪರಿಷದ್ ಸಂಘಪರಿವಾರದ ಧಾರ್ಮಿಕ ಸಂಘಟನೆಯಾಗಿ ಸ್ಥಳೀಯ ಘಟಕಗಳಿಗೆ, ತಾಲೂಕು ಘಟಕಗಳಿಗೆ ಸಹಿತ ಯಾರಿಗೂ ಮಾಹಿತಿ ನೀಡದೆ ಮಠದ ಪರವಾಗಿ ಮಾತನಾಡಿರುವುದು ಸರಿಯೇ  ಕಿಶೋರ್ ಶಿರಾಡಿ ಅಭಿಮಾನಿ ಬಳಗ ಅಸಮಾಧಾನ ವ್ಯಕ್ತಪಡಿಸುತ್ತದೆ.

Advertisement

 

 

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಸುಬ್ರಹ್ಮಣ್ಯ ವಿವಾದ : ಸ್ಥಳೀಯ ವಿಹಿಂಪ ಮುಖಂಡರು ಗೈರು ಏಕೆ ?"

Leave a comment

Your email address will not be published.


*