ಸುಬ್ರಹ್ಮಣ್ಯ: ಶ್ರೀರಾಮ ಸಮಸ್ತ ಹಿಂದೂಗಳ ಆದರ್ಶ ವ್ಯಕ್ತಿ. ಆತನ ಆಳ್ವಿಕೆಯ ಕಾಲದಲ್ಲಿ ರಾಜ್ಯ ಸುಬೀಕ್ಷೆಯಿಂದ ಕೂಡಿತ್ತು. ನ್ಯಾಯ ನೀತಿಗಳಿಂದ ತುಂಬಿತ್ತು. ಅಂತಹ ಯುಗಪುರುಷನ ಸಾಧನೆಗಳ ಹಿಂದೆ ಬಹಳಷ್ಟು ವಿಚಾರಧಾರೆಗಳಿವೆ ಎಂದು ಎಂದು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿಗಳು ಹೇಳಿದರು.
ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯ ಹಾಗೂ ಸ್ಥಳಿಯ ಕಲಾಸಕ್ತರ ಸಹಾಯೋಗದಲ್ಲಿ ಮಠದಲ್ಲಿ ಸೋಮವಾರ ನಡೆದ ಶ್ರೀರಾಮ ಗಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಆಶಿರ್ವಚನ ನೀಡಿದರು.
ಆಶೀರ್ವಚನದ ಬಳಿಕ ಕಲಾವಿದ ಯಜ್ಞೇಶಸ್ ಆಚಾರ್ ಮತ್ತು ಬಳಗದವರು ಹಾಗೂ ಸ್ಥಳಿಯರಿಂದ ಶ್ರೀ ರಾಮಗಾನೋತ್ಸವ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಮಠದ ದಿವಾನರಾದ ಸುದರ್ಶನ ಜೋಯಿಸ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement