ಸುಳ್ಯದಲ್ಲಿ ಅಸಹಕಾರ ಚಳುವಳಿ ಕೈಬಿಟ್ಟ ಬಿಜೆಪಿ

September 8, 2019
7:15 PM

ಸುಳ್ಯ: ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಲಭ್ಯವಾಗದ ಹಿನ್ನೆಲೆಯಲ್ಲಿ ಸುಳ್ಯ ಮಂಡಲ ಬಿಜೆಪಿ ವತಿಯಿಂದ ಚುನಾಯಿತರಾದ ಜನಪ್ರತಿನಿಧಿಗಳು ತೆಗೆದುಕೊಂಡಿರುವ ಅಸಹಕಾರ ಚಳವಳಿಯನ್ನು ಕೈಬಿಟ್ಟು ಕ್ಷೇತ್ರದ ತಮ್ಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸತತ 6 ಬಾರಿ ಚುನಾಯಿತರಾಗಿರುವ  ಸುಳ್ಯ ಕ್ಷೇತ್ರದ  ಶಾಸಕ ಎಸ್ ಅಂಗಾರ ಅವರಿಗೆ  ಸಚಿವ ಸ್ಥಾನ ನೀಡಬೇಕೆಂದು ಕ್ಷೇತ್ರದ ಸಂಘಟನೆಯ ಹಾಗೂ ಜನಸಾಮಾನ್ಯರ ಬೇಡಿಕೆ ಯಾಗಿತ್ತು. ಆದರೆ ಲಭ್ಯವಾಗದ ಹಿನ್ನೆಲೆಯಲ್ಲಿ ಬಿಜೆಪಿಯು ಸುಳ್ಯದಲ್ಲಿ ಅಸಹಕಾರ ಚಳುವಳಿ ಘೋಷಣೆ ಮಾಡಿತ್ತು.  ಬಗ್ಗೆ ಇದೀಗ  ಮುಖ್ಯಮಂತ್ರಿಗಳ ಬಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸುಳ್ಯದ ಭಾರತೀಯ ಜನತಾ ಪಾರ್ಟಿಯ ಪ್ರಮುಖರು ನಿಯೋಗ ಹೋಗುವುದೆಂದು ತೀರ್ಮಾನಿಸಲಾಗಿದ್ದಾರೆ. ಈ ಬಗ್ಗೆ ಸೆ.14 ರಂದು ನಿಯೋಗ ತೆರಳಲಿದೆ.

ಇದೀಗ ಬಿಜೆಪಿ ರಾಜ್ಯಾಧ್ಯಕ್ಷರು ಸೂಕ್ತ ಭರವಸೆಯನ್ನು ನೀಡಿರುವುದರಿಂದ, ಸುಳ್ಯ ಕ್ಷೇತ್ರದಲ್ಲಿ ಚುನಾಯಿತರಾದ ಬಿಜೆಪಿ ಜನಪ್ರತಿನಿಧಿಗಳು ತೆಗೆದುಕೊಂಡಿರುವ ಅಸಹಕಾರ ಚಳವಳಿಯನ್ನು ಕೈಬಿಟ್ಟು ಕ್ಷೇತ್ರದಲ್ಲಿ ತಮ್ಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮಂಡಲ ಸಮಿತಿಯಿಂದ ತೀರ್ಮಾನಿಸಲಾಗಿರುತ್ತದೆ ಎಂದು ಮಂಡಲ ಬಿಜೆಪಿಯು ಜನಪ್ರತಿನಿಧಿಗಳಿಗೆ ತಿಳಿಸಿದೆ ಎಂದು ತಿಳಿದುಬಂದಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ
April 18, 2026
7:03 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ
April 17, 2026
1:55 PM
by: ಸಾಯಿಶೇಖರ್ ಕರಿಕಳ
ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ
April 16, 2026
7:25 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ
April 16, 2026
7:06 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror