ಸುಳ್ಯ: ಸುಳ್ಯದಲ್ಲಿ ಬುಧವಾರ ಸಂಜೆ ಆಲಿಕಲ್ಲು ಮಳೆ ಸುರಿದಿದೆ. ಸಂಜೆ ನಾಲ್ಕು ಗಂಟೆಯ ವೇಳೆಗೆ ಗುಡುಗು ಸಿಡಿಲಿನೊಂದಿಗೆ ಆರಂಭಗೊಂಡ ಧಾರಾಕಾರ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಿರಂತರ ಎರಡನೇ ದಿನ ಸುಳ್ಯದಲ್ಲಿ ಉತ್ತಮ ಮಳೆಯಾಗಿದೆ.
ಮಳೆಯ ಜೊತೆಗೆ ಬೀಸಿದ ಗಾಳಿಗೆ ತಾಲೂಕಿನ ವಿವಿಧೆಡೆ ಮನೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ನಗರ ಸಮೀಪದ ಬೆಟ್ಟಂಪಾಡಿ, ಜಯನಗರಗಳಲ್ಲಿ ಏಳು ಮನೆಗಳಿಗೆ ಹಾನಿ ಸಂಭವಿಸಿದೆ. ಬೆಟ್ಟಂಪಾಡಿಯ ಬಾಲಕೃಷ್ಣ ಎಂಬವರ ಮನೆಯ ಮೇಲ್ಚಾವಣಿ ಗಾಳಿಗೆ ಹಾರಿ ಹೋಗಿದ್ದು ಮನೆಗೆ ಸಂಪೂರ್ಣ ಹಾನಿಯಾಗಿದೆ. ಅಲ್ಲದೆ ಸಮೀಪದ ಇತರ ಮನೆಗಳಿಗೂ ಅಲ್ಲಲ್ಲಿ ಹಾನಿ ಸಂಭವಿಸಿದೆ. ಮನೆಯ ಶೀಟ್‍ಗಳು ಹಾರಿ ಹೋಗಿದೆ.
ಅಜ್ಜಾವರ ಗ್ರಾಮದಲ್ಲಿಯೂ ಮನೆಗಳಿಗೂ, ಬಸ್ ನಿಲ್ದಾಣಕ್ಕೆ ಹಾನಿ ಸಂಭವಿಸಿದೆ. ಸೋಣಂಗೇರಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರ ಮುರಿದು ಬಿದ್ದಿದೆ. ಮಳೆ ಮತ್ತು ಗಾಳಿಯಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಗಾಳಿಗೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದೆ. ಸಂಜೆ ನಾಲ್ಕು ಗಂಟೆಯ ವೇಳೆಗೆ ಕಡಿತಗೊಂಡಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಳ್ಯದಲ್ಲಿ ಆಲಿಕಲ್ಲು ಮಳೆ : ಗಾಳಿಗೆ ಮನೆಗಳಿಗೆ ಹಾನಿ"