ಸುಳ್ಯ: ಕಡು ಬಿಸಿಲು ಮತ್ತು ಏರಿದ ತಾಪಮಾನದಿಂದ ಬೆಂದು ಬರಡಾಗಿದ್ದ ಇಳೆಗೆ ತಂಪೆರೆದು ಸುಳ್ಯದಲ್ಲಿ ಮಳೆಯ ಸಿಂಚನ. ಮಂಗಳವಾರ ಸಂಜೆ ಒಂದು ಗಂಟೆಗೂ ಹೆಚ್ಚು ಸಮಯ ಉತ್ತಮ ಮಳೆ ಸುರಿದಿದೆ. ಐದು ಗಂಟೆಯ ವೇಳೆಗೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಧಾರಾಕಾರ ಮಳೆ ಸುರಿಯಿತು.
ಸುಳ್ಯ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆ ಸುರಿದು ತಂಪಾದ ವಾತಾವರಣ ಉಂಟಾಗಿದೆ. ಜೋಡುಪಾಲ, ಎರಡನೇ ಮೊಣ್ಣಂಗೇರಿ ಮತ್ತಿತರ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿದ್ದು ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಣ್ಣು ಮಿಶ್ರಿತ ಕೆಂಪು ನೀರು ನದಿಯಲ್ಲಿ ಹರಿದು ಬರುತಿದೆ. ಆದರೆ ಪಯಸ್ವಿನಿ ನದಿಯು ಕೇರಳ-ಕರ್ನಾಟಕದ ಗಡಿ ಭಾಗದಲ್ಲಿ ಬತ್ತಿ ಬರಡಾದ ಸ್ಥಿತಿಯಲ್ಲಿದ್ದು ನೀರಿನ ಬವಣೆ ಎದುರಾಗಿತ್ತು. ಇದೀಗ ಉತ್ತಮ ಮಳೆಯಾಗಿರುವ ಕಾರಣ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿ ನೀರಿನ ಬವಣೆಗೆ ದೂರವಾಗಬಹುದು ಎಂಬ ನಿರೀಕ್ಷೆ ಉಂಟಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Advertisement
Be the first to comment on "ಸುಳ್ಯದಲ್ಲಿ ಇಳೆಗೆ ತಂಪೆರೆದ ಮಳೆ"