ಸುಳ್ಯದಲ್ಲಿ ಬಿಜೆಪಿಯ ಬೆನ್ನು ಬಿಡದ ಅಡ್ಡ ಮತದಾನ ಪ್ರಕರಣ

ಸುಳ್ಯ: ಡಿಸಿಸಿ ಬ್ಯಾಂಕ್ ಅಡ್ಡಮತದಾನ ಪ್ರಕರಣದ ಬಳಿಕ ನಗರ ಪಂಚಾಯತ್ ಚುನಾವಣೆ ಮುಗಿದರೂ ಅಡ್ಡ ಮತದಾನದ ಇಶ್ಯೂ ಬಿಜೆಪಿಗೆ ಮುಗಿದಿಲ್ಲ. ಇದೀಗ ಮತ್ತೆ ಸುದ್ದಿಯಾಗುತ್ತಿದೆ.

Advertisement

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅಡ್ಡಮತದಾನ ನಡೆದು ಬಿಜೆಪಿ ಹಾಗೂ ಸಹಕಾರ ಭಾರತಿ , ಸಂಘಪರಿವಾರಕ್ಕೆ ಮುಜುಗರವಾಗಿತ್ತು. ಜಿಲ್ಲೆಯಲ್ಲಿ  ಬಹುದೊಡ್ಡ ಸಂಘಟನೆ ಹೊಂದಿದ್ದರೂ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿಯಲು ಆಗದೇ ಇರುವ ಬಗ್ಗೆ ಬಹುತೇಕ ಬಿಜೆಪಿ ಕಾರ್ಯಕರ್ತರು ಮಾತನಾಡುತ್ತಾರೆ. ಆದರೆ ಸುಳ್ಯದಲ್ಲಿ ಮಾತ್ರಾ ಈ ಅಡ್ಡಮತದಾನ ಪ್ರಕರಣ ಇಡೀ ಜಿಲ್ಲಾಮಟ್ಟದಲ್ಲಿ ಸುದ್ದಿಯಾಗಿತ್ತು. ಜಿಲ್ಲೆಯ ಇತರ ಕಡೆಗಳಲ್ಲಿ  ಬಿಜೆಪಿ ಅಥವಾ ಸಹಕಾರ ಭಾರತಿ ಬಂಡಾಯ ಅಭ್ಯರ್ಥಿಗಳು ಗೆಲವು ಕಂಡಿದ್ದರೆ ಸುಳ್ಯದಲ್ಲಿ ಮಾತ್ರಾ ಭಿನ್ನವಾಗಿತ್ತು. ಹೀಗಾಗಿ ಸಂಘಟನೆಯ ಸಿದ್ಧಾಂತಯರ ಮೇಲೆಯೇ ಚರ್ಚೆಯಾಗಿತ್ತು. ಇದಕ್ಕಾಗಿ ಸುಳ್ಯದಲ್ಲಿ ಅಡ್ಡಮತದಾನ ಮಾಡಿದವರು ಮೇಲೆ ಶಿಸ್ತು ಕ್ರಮಕೈಗೊಳ್ಳಲು ವಿವಿಧ ಪ್ರಯತ್ನ ನಡೆಸಿತ್ತು. ಅದರಲ್ಲಿ ಕಾನತ್ತೂರು ದೈವಸ್ಥಾನದಲ್ಲಿ ಪ್ರಮಣ ಮಾಡುವುದು  ಮೊದಲ ಪ್ರಯತ್ನವಾಯಿತು, ಅಲ್ಲೂ ಅಡ್ಡ ಮತದಾನ ತಿಳಿತಯದ ಕಾರಣ ಮತದಾನ ಮಾಡಿದ ಎಲ್ಲರೂ ರಾಜೀನಾಮೆ ನೀಡುವಂತೆ ಪಕ್ಷ ಸೂಚನೆ ನೀಡಿತು. ಅದೂ ಇದುವರೆಗೆ ಯಾವುದೇ ಜಾರಿಯಾಗದ ಬಗ್ಗೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿರುವಂತೆಯೇ ಇದೀಗ ಮತ್ತೊಂದು ಚರ್ಚೆ ಶುರುವಾಗಿದೆ.

Advertisement

ಕಾನತ್ತೂರಿನ ದೈವಸ್ಥಾನದಲ್ಲಿ ಪ್ರಮಾಣದಲ್ಲಿ ಭಾಗಿಯಾದ ಕೆಲವು ಮಂದಿ ಮತ್ತೆ ಕಾನತ್ತೂರಿಗೆ ತೆರಳಿದ್ದು ತಪ್ಪು ಕಾಣಿಕೆ ಹಾಕಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತವಾದ ಮಾಹಿತಿ ಕಾರ್ಯಕರ್ತರಿಗೆ ತಿಳಿಯದೇ ಇರುವ ಕಾರಣ ಇದೀಗ ಚರ್ಚೆ ನಡೆಸುತ್ತಿದ್ದಾರೆ. ಆದರೆ ಯಾವುದೇ ದಾಖಲೆಗಳು ಇಲ್ಲದ ಕಾರಣ ಚರ್ಚೆಗೆ ಅರ್ಥ ಬಂದಿಲ್ಲ. ಅಂತೂ ಅಡ್ಡ ಮತದಾನದ ಪ್ರಕರಣ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮುಂದಿನ ಚುನಾವಣೆಯ ಹೊತ್ತಿಗೆ ಬಿಜೆಪಿ ಹಾಗೂ ಸಂಘಪರಿವಾರವು ನಗರ ಪಂಚಾಯತ್ ಚಯನಾವಣೆಯಲ್ಲಿ  ಕೈಗೊಂಡಂತೆ ಹೊಸಬರಿಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಬರಬಹುದು ಎಂಬುದು  ಕಾರ್ಯಕರ್ತರ ಅಂಬೋಣ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಸುಳ್ಯದಲ್ಲಿ ಬಿಜೆಪಿಯ ಬೆನ್ನು ಬಿಡದ ಅಡ್ಡ ಮತದಾನ ಪ್ರಕರಣ"

Leave a comment

Your email address will not be published.


*