ಸುಳ್ಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು ಶಿಕ್ಷಣ ಸಚಿವರ ಸರಳ ನಡೆ

March 1, 2020
3:09 PM

ಸುಳ್ಯ: ಯಾವುದೇ ಜನಪ್ರತಿನಿಧಿ ಭೇಟಿಯಾಗಬೇಕಾದರೆ ಕೆಲವು ದಿನಗಳ ಮುಂದೆಯೇ ಮಾತುಕತೆ ಮಾಡಬೇಕು. ಇಷ್ಟೆಲ್ಲಾ ಆದರೂ ಭೇಟಿಯ ಸಮಯ ಕೆಲವೇ ನಿಮಿಷ ಮಾತ್ರಾ. ಆದರೆ ಕೆಲವು ಜನಪ್ರತಿನಿಧಿಗಳು ಸಿಂಪಲ್ ಆಗಿರುತ್ತಾರೆ, ಇದಕ್ಕೊಂದು ಉದಾಹರಣೆ ಶಿಕ್ಷಣ ಸಚಿವ ಸುರೇಶ್ ಕುಮಾರ್.

Advertisement
Advertisement
Advertisement

ಶನಿವಾರ ಮಡಿಕೇರಿ ಕಡೆಗೆ ಭೇಟಿ ನೀಡುವ ವೇಳೆ ಸುಳ್ಯದ ಹೋಟೆಲ್ ಬಳಿ ಚಹಾಕ್ಕೆಂದು ನಿಲ್ಲಿಸಿದ್ದರು. ಈ ಸಂದರ್ಭ ಸುಳ್ಯದ ಹಲವು ಮಂದಿಯನ್ನು ಮಾತನಾಡಿಸಿದರು. ಇವರಲ್ಲಿ  ಪುತ್ತೂರು ತಾಲೂಕಿನ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಪ್ರಕಾಶ ಮೂಡಿತ್ತಾಯ ಹಾಗೂ ಸುಳ್ಯ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿರುವ ಶಿಕ್ಷಕ ಡಾ. ಸುಂದರ ಕೇನಾಜೆ ಸಚಿವರ ಗಮನ ಸೆಳೆಸಿದ್ದಾರೆ. ಈ ಬಗ್ಗೆ ಸಚಿವರು ತಮ್ಮ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.  ಎಲ್ಲೇ ಭೇಟಿ ನೀಡಿದರೂ ಜನಸಾಮಾನ್ಯರ ಬಗ್ಗೆ, ಉತ್ತಮ ಚಟುವಟಿಕೆಗಳ ಬಗ್ಗೆ ಪೇಸ್ ಬುಕ್ ನಲ್ಲಿ  ಬರೆದುಕೊಳ್ಳುವ ಸಚಿವರು ಕೆಲವು ಸಮಸ್ಯೆಗಳಿಗೆ ಸ್ವತ: ಪ್ರತಿಕ್ರಿಯೆ ನೀಡುತ್ತಾರೆ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತಾರೆ. ಹೀಗಾಗಿ ರಾಜ್ಯದ ಜನಪ್ರಿಯ ಸಚಿವ ಎನಿಸಿಕೊಂಡಿದ್ದಾರೆ ಮಾತ್ರವಲ್ಲ ಉತ್ತಮ ಆಡಳಿತ ನಡೆಸುವ ಸಚಿವರೂ ಆಗಿದ್ದಾರೆ.

Advertisement

ಸುಳ್ಯದಲ್ಲಿ ಭೇಟಿಯಾದ ಪ್ರಕಾಶ ಮೂಡಿತ್ತಾಯ ಹಾಗೂ  ಡಾ. ಸುಂದರ ಕೇನಾಜೆ ಯಕ್ಷಗಾನ ಕುರಿತ ಪಠ್ಯಪುಸ್ತಕವನ್ನು ನೀಡಿದ್ದರು. ಈ ಬಗ್ಗೆ ಆಸಕ್ತ ಹಾಗೂ ಸಂತಸ ವ್ಯಕ್ತ ಪಡಿಸಿದ ಸಚಿವರು “ಇಂತಹ ಸೃಜನಶೀಲ ಶಿಕ್ಷಕರ ಭೇಟಿ ಆದಾಗ ನನ್ನ ಉತ್ಸಾಹ ನೂರ್ಪಾಲು ಹೆಚ್ಚುತ್ತದೆ “ ಎಂದು ಹೇಳಿಕೊಂಡಿದ್ದಾರೆ.

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ
November 25, 2024
8:07 PM
by: The Rural Mirror ಸುದ್ದಿಜಾಲ
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ
November 25, 2024
8:03 PM
by: The Rural Mirror ಸುದ್ದಿಜಾಲ
ಹಾನಿಯಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ
November 25, 2024
7:50 PM
by: The Rural Mirror ಸುದ್ದಿಜಾಲ
ಐದು ತಿಂಗಳಲ್ಲಿ 100 ಕೋಟಿ ಗಿಡ ನೆಡುವ ಮೂಲಕ ಅಭಿಯಾನ ಯಶಸ್ವಿ | ಪ್ರಧಾನಿ ಮೋದಿ ಶ್ಲಾಘನೆ
November 25, 2024
7:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror