ಸುಳ್ಯದಲ್ಲಿ ಲಂಚಾವತಾರ: ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಆಮ್ ಆದ್ಮಿ ಪಕ್ಷ ಒತ್ತಾಯ

Advertisement

ಸುಳ್ಯ: ಭ್ರಷ್ಟಾಚಾರ ಸುಳ್ಯದ ಬಹುತೇಕ ಇಲಾಖೆಗಳಲ್ಲಿ ತಾಂಡವವಾಡುತ್ತಿದೆ ಎಂಬ ವಿಚಾರ ಜನಸಾಮಾನ್ಯರಿಗೆ ನಿತ್ಯಜೀವನದಲ್ಲಿ ಅನುಭವಕ್ಕೆ ಬರುತ್ತಿದೆಯಾದರೂ ಬಹುತೇಕ ಜನತೆಗೆ ಆಡಳಿತ ವ್ಯವಸ್ಥೆ ಶುದ್ದೀಕರಣ ಯಾವ ರೀತಿ ಮಾಡಬೇಕೆಂದೆ ತಿಳಿಯದಾಗಿದೆ. ಆಯ್ಕೆಯಾದ ಜನಪ್ರತಿನಿಧಿ ಭ್ರಷ್ಟಾಚಾರ ಮಾಡದೇ ಇದ್ದರೆ ಸಾಲದು, ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಬೇಕಿದೆ. ಸುಳ್ಯದಲ್ಲಿ ಈಗ ಕಂಡುಬಂದ ಭ್ರಷ್ಟಾಚಾರ ವಿರುದ್ಧ ಸೂಕ್ತ ಕ್ರಮವಾಗಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

Advertisement

 

Advertisement
Advertisement

ಇಂದು ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆತುತ್ತಿರುವು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಗಿದ್ದು ಮಲೆನಾಡಿನ 17 ತಾಲೂಕಿನ ದೊಡ್ಡ ಮಟ್ಟಿನ ಕೃಷಿ ಭೂಮಿ ಪರಬಾರೆ ಇತ್ಯಾದಿ ಕೃಷಿಯೇತರರಿಗೆ ನಕಲಿ ದಾಖಲೆಗಳ ಮೂಲಕ ನಡೆಯುತ್ತಿದ್ದು ಕಳೆದ 15 ವರ್ಷಗಳ ಪರಬಾರೆ ದಾಖಲೆಗಳನ್ನು ತನಿಖೆ ಒಳಪಡಿಸಬೇಕು, ಪರಿಸರ ಹಾಗೂ ಕೃಷಿ ನಾಶ ತಡೆಯಬೇಕು ಎಂಬುದಾಗಿ ಕಂದಾಯ ಸಚಿವರನ್ನು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ ಎಂದು ಎಎಪಿ ಮುಖಂಡ ಅಶೋಕ್ ಎಮಡಲೆ ತಿಳಿಸಿದ್ದಾರೆ.

 

Advertisement

ಇದೀಗ ಸುಳ್ಯದ ಸಬ್ ರಿಜಿಸ್ಟ್ರಾರ್ ಭ್ರಷ್ಟಾಚಾರ ಬಗ್ಗೆ ಜನಸಾಮಾನ್ಯರು ನೊಂದು ವೀಡಿಯೋ ವರದಿ ಮಾಡುವ ಮೂಲಕ ತಮ್ಮ ಕೊನೆಯ ಆಕ್ರೋಶದ ಅಸ್ತ್ರ ಪ್ರಯೋಗ ಮಾಡಿದ್ದಾರೆ ‌ಇದರ ಬಗ್ಗೆಯೂ ಕೂಲಕುಂಶ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿ ಪಡಿಸಬೇಕು, ಮಾತ್ರವಲ್ಲ ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರನ್ನು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ.

ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿರೋಧ ಪಕ್ಷದ ಬಿಜೆಪಿ ಕಾರ್ಯಕರ್ತರೇ ಮದ್ಯವರ್ತಿಗಳಾಗಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲದಾಗಿದೆ. ಸುಳ್ಯದಲ್ಲಿ ಭ್ರಷ್ಟಾಚಾರ ವಿರುದ್ದ ಬಿಜೆಪಿಯನ್ನು ಜನತೆ ಕಳೆದ 25 ವರ್ಷದಿಂದ ಎಲ್ಲಾ ಸ್ತರದಲ್ಲಿ ಆಯ್ಕೆ ಮಾಡಿದ್ದರೂ , ಬಿಜೆಪಿಯೂ ಒಂದು ವಿಶಿಷ್ಟ ಧಾರ್ಮಿಕ ಸಿದ್ದಾಂತದ ವಿಚಾರಕ್ಕೆ ಸೀಮಿತವಾದ ಪಕ್ಷವಾಗಿ, ಆಡಳಿತದಲ್ಲಿ ನಡೆಯುವ,  ಯಾವುದೇ ಭ್ರಷ್ಟಾಚಾರ ವಿಷಯದಲ್ಲಿ ಈ ತನಕ‌ ಹೋರಾಟವಾಗಲಿ , ತನಿಖೆಗೆ ದೂರು ನೀಡಿದ ಕುರುಹು ಕಂಡು ಬರುವುದಿಲ್ಲ. ರಾಜ್ಯ ಆಡಳಿತ ಕಾಂಗ್ರೆಸ್ ಸ್ಥಳೀಯವಾಗಿ ನಿಷ್ಕ್ರಿಯವಾಗಿ ಕೇವಲ ಬ್ರೋಕರ್ ಕೆಲಸದಲ್ಲಿ ನಿರತವಾಗಿದೆ  ಎಂದು ಆರೋಪಿಸಿದೆ.

Advertisement

ಜನಸಾಮಾನ್ಯರು, ರೈತರು ಶ್ರಮಿಕರು ಭ್ರಷ್ಟಾಚಾರ ವಿರುದ್ದ ಒಂದಾಗಿ ವಿರೋಧಿಸಬೇಕು ಭ್ರಷ್ಟಾಚಾರ ವಿರೋಧಿ ಆಮ್ ಆದ್ಮಿ ಪಾರ್ಟಿ ಆಂದೋಲನದಲ್ಲಿ ಕೈಜೋಡಿಸಬೇಕೆಂದು ಎಂದು ಆಮ್ ಆದ್ಮಿ ಮನವಿ ಮಾಡಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಳ್ಯದಲ್ಲಿ ಲಂಚಾವತಾರ: ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಆಮ್ ಆದ್ಮಿ ಪಕ್ಷ ಒತ್ತಾಯ"

Leave a comment

Your email address will not be published.


*