ಸುಳ್ಯದಲ್ಲಿ ಶುರುವಾಗಿದೆ “ಸಂಚಾರಿ ಯೋಗ “, ಮನೆಮನೆಗೂ ಬರಲಿದ್ದಾರೆ ಯೋಗ ಗುರುಗಳು….!

Advertisement

ಸುಳ್ಯ: ಸುಳ್ಯದಲ್ಲಿ  ಇದೀಗ “ಸಂಚಾರಿ ಯೋಗ” ಎಂಬ ವಿಶೇಷ ಅಭಿಯಾನ ಶುರುವಾಗಿದೆ. ಪ್ರತೀ ಗ್ರಾಮ, ಹಳ್ಳಿ, ವಾರ್ಡ್ ಗಳಿಗೆ ಯೋಗ ಗುರುಗಳು ಆಗಮಿಸಿ ಯೋಗದ ಬಗ್ಗೆ ತರಬೇತಿ ನೀಡಿಲಿದ್ದಾರೆ. ಇದರ ಆರಂಭ ಉಬರಡ್ಕದಲ್ಲಿ  ನಡೆದಿದೆ. 15 ದಿನಗಳ ಕಾಲ ಇಲ್ಲಿ ಯೋಗ ಶಿಬಿರ ನಡೆಯಲಿದೆ. ಈ ಶಿಬಿರ  ಯೋಗಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ನಡೆಯುತ್ತಿದೆ.

Advertisement

ಯೋಗವೆಂಬುದು ಈಗ ಎಲ್ಲರ ಸೊತ್ತು. ಹಿಂದೆಲ್ಲಾ ಯೋಗ ಎಂದರೇನು ಎಂಬುದನ್ನು ಸಾಕಷ್ಟು ಬಾರಿ ವಿವರವಾಗಿ ಹೇಳಿದರೂ ಯೋಗದ ಬಗ್ಗೆ ಅನಾದಾರ ಇತ್ತು. ಭಾರತೀಯ ಪರಂಪರೆ ಇದಕ್ಕಿದ್ದರೂ ಯೋಗದ ಮಹತ್ವ ತಿಳಿದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಯಾವಾಗ ಯೋಗವು ವಿಶ್ವದ ಮಟ್ಟಕ್ಕೆ ತಲಪಿತೋ ಅಂದಿನಿಂದಲೇ ಯೋಗವು ಎಲ್ಲರ ಸೊತ್ತಾಯಿತು. ಪ್ರತಿಯೊಬ್ಬರೂ ಯೋಗ ಮಾಡುವುದಕ್ಕೆ ಆರಂಭ ಮಾಡಿದರು. ಹೀಗಾಗಿ ವಿಶ್ವಯೋಗದಿನ ಮಾತ್ರವಲ್ಲ ಯೋಗ ಕೇಂದ್ರಗಳು ತೆರೆದವು, ಪ್ರತೀ ಹಳ್ಳಿಗೂ ಯೋಗದ ಬಗ್ಗೆ ಅರಿವು ಮೂಡಿತು.

Advertisement

 

Advertisement

 

ವಿಶ್ವ  ಯೋಗದ ಕಲ್ಪನೆ ಹೀಗಿತ್ತು,  ಭಾರತೀಯ ಪರಂಪರೆಯಲ್ಲಿ  ಯೋಗಕ್ಕೆ ಮಹತ್ವದ ಸ್ಥಾನವಿತ್ತು. ಋಷಿಮುನಿಗಳು ಯೋಗದ ಮೂಲಕವೇ ದೇಹವನ್ನು, ಮನಸ್ಸನ್ನು ನಿಯಂತ್ರಣ ಮಾಡುತ್ತಿದ್ದರು. ರೋಗ ಮುಕ್ತ ಬದುಕು ಸಾಗಿಸುತ್ತಿದ್ದರು. ಆದರೆ ಕಾಲಕ್ರಮೇಣ ಯೋಗ ಮರೆಯಾಯಿತು. ದೇಶದಲ್ಲಿ  ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಇದಕ್ಕೆ ಆಹಾರ, ವಿಹಾರ, ಮನಸ್ಸೂ ಕಾರಣವಾಯಿತು. ಸಮೀಕ್ಷೆಯೊಂದರ ಪ್ರಕಾರ ಈ ದೇಶದಲ್ಲಿ ಶೇ.30 ರಷ್ಟು ಯುವಕರ ಸಹಿತ 50 ವರ್ಷದ ಕೆಳಗಿನ ಮಂದಿ ವಿವಿಧ ಗಂಭೀರವಲ್ಲದ  ಕಾಯಿಲೆಯಿಂದ ಬಳಲುತ್ತಿದ್ದರು. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಹೀಗಾದರೆ ದೇಶದ ಮಾನವ ಸಂಪನ್ಮೂಲದ ಸದ್ಭಳಕೆ ಕಷ್ಟವಾಗುತ್ತಿದೆ. ಇದೇ ರೀತಿಯಲ್ಲಿ ಸಾಗಿದರೆ ಮುಂದಿನ 25 ವರ್ಷಗಳಲ್ಲಿ  ಯುವಕರೇ ರೋಗದಿಂದ ಬಳಲುತ್ತಾರೆ,. ಹೀಗಾದರೆ ಮಾನವ ಸಂಪನ್ಮೂಲದ ಕೊರತೆ ಹೆಚ್ಚುತ್ತದೆ. ಹೀಗಾಗಿ ಇಂತಹ ರೋಗಗಳ ನಿವಾರಣೆ ಹಾಗೂ ಗಂಭೀರವಲ್ಲದ ಕಾಯಿಲೆಗೆ ಸೂಕ್ತ ಚಿಕಿತ್ಸೆ ಯೋಗ. ಇದರ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಯೋಗವನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿದರು. ಇದು ಭಾರತದಲ್ಲೂ ಮತ್ತೆ ಯೋಗ ಜೀವಪಡೆಯುವುದಕ್ಕೆ ಸಾಧ್ಯವಾಯಿತು. ಹೀಗಾಗಿ ಈಗ ಭಾರತದ ಹಳ್ಳಿ ಹಳ್ಳಿಗಳಲ್ಲೂ ಯೋಗ ಶಿಬಿರ ನಡೆಯುತ್ತಿದೆ. ಇದೀಗ ಅದರ ಭಾಗವಾಗಿ “ಸಂಚಾರಿ ಯೋಗ ಆರಂಭವಾಗುತ್ತಿದೆ ಸುಳ್ಯದಲ್ಲಿ.

Advertisement

 

Advertisement

 

ಏನಿದು  ಸಂಚಾರಿ ಯೋಗ ತರಬೇತಿ:

Advertisement

ಯೋಗಾಭ್ಯಾಸ ಸಪ್ತ ಸಾಗರಗಳ ಸಂಗಮ. ಭಾರತೀಯ ಪರಂಪರೆಯಯ ಪ್ರತೀಕ. ಸೃಷ್ಠಿಯನ್ನು ಬಿಟ್ಟು  ಯೋಗವಿಲ್ಲ. ಯೋಗವು ತ್ಯಾಗದ ಮೂಲಾಧಾರ . ಯೋಗದ ಮೂಲಕ ಗುರಿ, ಮಾನಸಿಕ ಸ್ಥಿರತೆ, ಶಾರೀರಿಕ ಶುದ್ಧತೆ ಸಾದ್ಯವಿದೆ. ಯೋಗದ ಬೆಳಕು ಪ್ರತಿಯೊಬ್ಬರ ಹೃದಯಲ್ಲಿ ಬೆಳೆಯಬೇಕು. ಹೀಗಾಗಿ 15 ದಿನಗಳ ಯೋಗ ತರಬೇತಿ ಯೋಗ ಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ  ತಾಲೂಕಿನ ವಿವಿಧ ಕಡೆ ನಡೆಯಲಿದೆ. ಶಿಬಿರ ಉಚಿತವಾಗಿರುತ್ತದೆ. ಶಿಬಿರಾರ್ಥಿಗಳು ಆಯಾ ಗ್ರಾಮದವರು ಇರುತ್ತಾರೆ. ಸೇವಾ ರೂಪದಲ್ಲಿ ಯೋಗ ತರಬೇತಿ ನೀಡುವ ಇವರ ಕಾಳಜಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಶಿಬಿರ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ 15 ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ಇದೀಗ ಮೊದಲ ಶಿಬಿರ ಉಬರಡ್ಕದಲ್ಲಿ ಆರಂಭಗೊಂಡಿದೆ. ಮೊದಲ ದಿನ  ಹಾಗೂ ಜನರಿಗೆ ಅರಿವಿನ ಕೊರತೆಯಿಂದ ಕೊಂಚ ಕಡಿಮೆ ಪ್ರತಿಕ್ರಿಯೆ ಬಂದಿದೆ , ಆದರೆ ಇದು ನಿರಂತರ ಶಿಬಿರವಾಗಿರುತ್ತದೆ. ಉತ್ಸಾಹ ಕುಂದದೆ ಈ ಸೇವೆ ಮಾಡಲು ಸಾರ್ವಜನಿಕರೂ ಸಹಕರಿಸಬೇಕು ಎಂಬುದು ಆಶಯ.

 

Advertisement

ಉಬರಡ್ಕದಲ್ಲಿ ನಡೆದ ಶಿಬಿರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶ್ರೀನಿವಾಸ ಉಬರಡ್ಕ ಉದ್ಘಾಟಿಸಿದರು. ಅತಿಥಿಗಳಾಗಿ  ಉಬರಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ಇದ್ದರು.

Advertisement

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯದಲ್ಲಿ ಶುರುವಾಗಿದೆ “ಸಂಚಾರಿ ಯೋಗ “, ಮನೆಮನೆಗೂ ಬರಲಿದ್ದಾರೆ ಯೋಗ ಗುರುಗಳು….!"

Leave a comment

Your email address will not be published.


*