ಸುಳ್ಯದಲ್ಲಿ 94ಸಿ ಯಲ್ಲಿ 4703 ಅರ್ಜಿಗಳು ತಿರಸ್ಕೃತ : ಮರು ಪರಿಶೀಲನೆಗೆ ಸೂಚನೆ

Advertisement

ಸುಳ್ಯ: ಸುಳ್ಯ ತಾಲೂಕಿನಲ್ಲಿ 94ಸಿ ಯೋಜನೆಯಡಿಯಲ್ಲಿ 4703 ಅರ್ಜಿಗಳು ತಿರಸ್ಕೃತಗೊಂಡಿದ್ದು ಇದರ ಮರು ಪರಿಶೀಲನೆ ನಡೆಸಬೇಕು ಎಂದು  ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಸೂಚನೆ ನೀಡಿದ್ದಾರೆ.

Advertisement

ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಸುಳ್ಯದಲ್ಲಿ ಒಟ್ಟು 5082 ಅರ್ಜಿಗಳಿಗೆ 94 ಸಿ ಮಂಜೂರಾಗಿದೆ. 4703 ಅರ್ಜಿಗಳು ಯಾಕೆ ತಿರಸ್ಕೃ ತಗೊಂಡಿದೆ ಎಂದು ಐವನ್ ಡಿಸೋಜ ಪ್ರಶ್ನಿಸಿದರು.  ಪ್ರತಿ ಗ್ರಾಮ ಮಟ್ಟದಲ್ಲಿ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಹಾಯಕ ಕಮೀಷನರ್ ಮತ್ತು ತಹಶೀಲ್ದಾರ್ ಅವರಿಗೆ ಸೂಚಿಸಿದರು.

Advertisement
Advertisement

ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್‍ಗಳನ್ನು ಸಮರ್ಪಕವಾಗಿ ಮಾಡಲು ಸೂಚನೆ ನೀಡಿದರು. ಮುಂದಿನ ಕಂದಾಯ ಅದಾಲತ್‍ಗೆ ಖುದ್ದಾಗಿ ಭಾಗವಹಿಸಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವುದಾಗಿ ಅವರು ಹೇಳಿದರು. ಸರ್ವೆ ಇಲಾಖೆಯಲ್ಲಿ ಅರ್ಜಿಗಳು ಕಡಿಮೆ ವಿಲೇವಾರಿ ಆಗಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸರ್ವೆ ಇಲಾಖೆಯ ಬಗ್ಗೆ ತುಂಬಾ ದೂರುಗಳಿವೆ ಇದರ ಬಗ್ಗೆ ಕ್ರಮ ಕೈಗೊಳ್ಳಲು ಸಹಾಯಕ ಕಮೀಷನರ್ ಅವರಿಗೆ ಸೂಚಿಸಿದರು. ಸರ್ವೆ ಇಲಾಖೆಯಲ್ಲಿ ಹೆಚ್ಚು ಸರ್ವೆಯರ್ ಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ನಗರ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಮಟ್ಟದಲ್ಲಿ ನಿವೇಶನಕ್ಕೆ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಸ್ಥಳ ಕಾದಿರಿಸುವಂತೆ ಸೂಚಿಸಿದರು. ಅಕ್ರಮ ಸಕ್ರಮ ಸಮಿತಿಗೆ ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸುವ ಬಗ್ಗೆ ಸರಕಾರ ಯೋಚನೆ ನಡೆಸುತಿದೆ ಎಂದು ಅವರು ಹೇಳಿದರು.

Advertisement

ಶಾಸಕ ಎಸ್.ಅಂಗಾರ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಪುತ್ತೂರು ಸಹಾಯಕ ಕಮೀಷನರ್ ಡಾ.ಹೆಚ್.ಕೆ.ಕೃಷ್ಣಮೂರ್ತಿ, ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್, ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸದಸ್ಯರಾದ ಅಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್, ತೀರ್ಥರಾಮ ಜಾಲ್ಸೂರು, ನ.ಪಂ.ಸದಸ್ಯರಾದ ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಪ್ರಮುಖರಾದ ಎಸ್.ಸಂಶುದ್ದೀನ್, ಕಾವು ಹೇಮನಾಥ ಶೆಟ್ಟಿ, ಪಿ.ಎಸ್.ಗಂಗಾಧರ, ಭಾಗೀರಥಿ ಮುರುಳ್ಯ, ಬೆಟ್ಟ ರಾಜಾರಾಂ ಭಟ್, ರಾಧಾಕೃಷ್ಣ ಪರಿವಾರಕಾನ, ಕೆ.ಎಂ.ಮುಸ್ತಫಾ, ಮಹಮ್ಮದ್ ಕುಂಞ ಗೂನಡ್ಕ, ಸಿದ್ದಿಕ್, ಶಾಫಿ ಕುತ್ತಮೊಟ್ಟೆ, ಆರ್.ಕೆ.ಮಹಮ್ಮದ್, ಧರ್ಮಪಾಲ ಕೊಯಿಂಗಾಜೆ, ಲಕ್ಷ್ಮಣ ಶೆಣೈ, ಕೆ.ಕೆ.ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Advertisement

 

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯದಲ್ಲಿ 94ಸಿ ಯಲ್ಲಿ 4703 ಅರ್ಜಿಗಳು ತಿರಸ್ಕೃತ : ಮರು ಪರಿಶೀಲನೆಗೆ ಸೂಚನೆ"

Leave a comment

Your email address will not be published.


*