ಸುಳ್ಯದಲ್ಲೊಂದು ಮಕ್ಕಳ ಕನಸು ಚಿಗುರುವ ಹಬ್ಬ ದೇಶ ಸೇವೆಯ ಕನಸು ಬಿತ್ತಿದ ಸೈನಿಕರ ಮಾತು

Advertisement

ಸುಳ್ಯ: ಬೆಳೆಯುವ ಮಕ್ಕಳಲ್ಲಿ ಕನಸನ್ನೂ, ಸಂತಸವನ್ನು ಬಿತ್ತುವ ಚಿಗುರು ಬೇಸಿಗೆ ಶಿಬಿರ ವಿಭಿನ್ನ ಕಾರ್ಯ ಚಟುವಟಿಕೆಗಳಿಂದ ಗಮನ ಸೆಳೆದಿದೆ.
ಸುಳ್ಯದ ಬ್ರಾಹ್ಮಣ ಸಂಘದ ಹಾಸ್ಟೇಲ್ ಸಭಾಂಗಣದಲ್ಲಿ ನಡೆಯುತ್ತಿರುವ ಚಿಗುರು ಬೇಸಿಗೆ ಶಿಬಿರ ವೈವಿಧ್ಯತೆಯ ಮೂಲಕ ಮಕ್ಕಳಲ್ಲಿ ಸಂತಸದ ಹೊನಲು ಹರಿಸಿದೆ. ಭಾರತೀಯ ಸೈನ್ಯದ, ಸೈನಿಕರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂಬ ದೃಷ್ಠಿಯಿಂದ ಹಮ್ಮಿಕೊಂಡ ಸೈನಿಕರ ಮಾತು ಮಕ್ಕಳಲ್ಲಿ ದೇಶ ಸೇವೆಯ ಮತ್ತು ಶಿಸ್ತಿನ ಪಾಠವನ್ನು ಕಲಿಸಿತು. ಸೈನಿಕರಾದ ಬಾಳಿಲದ ಪಿ.ರತ್ನಾಕರ ರೈ ಮಕ್ಕಳಿಗೆ ಸೈನಿಕ ವೃತ್ತಿಯ ಬಗ್ಗೆ, ದೇಶ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಡೆದ ಸಂವಾದದಲ್ಲಿ ಮಕ್ಕಳ ಹಲವು ಪ್ರಶ್ನೆಗಳಿಗೆ, ಸಂಶಯಗಳಿಗೆ ಅವರು ಉತ್ತರಿಸಿದರು. ಮಕ್ಕಳಲ್ಲಿ ರಾಷ್ಟ್ರ ಭಕ್ತಿಯ, ದೇಶ ಸೇವೆಯ ಕನಸನ್ನು ಬೆಳೆಸಲು ಪೂರಕಾಗಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Advertisement

 

Advertisement
Advertisement

`ಮಕ್ಕಳ ಕನಸು ಚಿಗುರುವ ಹಬ್ಬ’ ಎಂಬ ಟ್ಯಾಗ್ ಲೈನ್ ನೊಂದಿಗೆ ನಡೆಯುವ ಎರಡನೇ ವರ್ಷದ ಚಿಗುರು ಶಿಬಿರದಲ್ಲಿ ಹಲವು ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ. ಸೈನಿಕರ ಮಾತಿನ ಜೊತೆಗೆ ಗಾಳೀಪಟ ಉತ್ಸವ, ಹುಲಿಮುಖ ವೇಷ ನೃತ್ಯ, ನಿರೂಪಣೆ, ಅಭಿನಯ, ಬಣ್ಣದ ಚಿತ್ತಾರ, ವರ್ಲಿ ಕಲೆ, ಪ್ರಕೃತಿ ವೀಕ್ಷಣೆ, ಸಮರ ಕಲೆ, ಫ್ಯಾಶನ್ ಶೋ, ರಸ ಮಂಜರಿ ಹೀಗೆ ಮಕ್ಕಳ ಮನಸಿಗೆ ಮುದ ನೀಡುವ ಕಾರ್ಯಕ್ರಮದ ಜೊತೆಗೆ ನೃತ್ಯ, ಸ್ಕೇಟಿಂಗ್, ವ್ಯಾಯಾಮಗಳು, ರಿಂಗ್ ಬ್ಯಾಲೆನ್ಸ್, ಮೋಜಿನ ಆಟಗಳು ಸಮ್ಮರ್ ಕ್ಯಾಂಪ್‍ನ ಹೈಲೈಟ್ಸ್. ಕ್ಯಾಂಪ್‍ನಲ್ಲಿ ಕಲಿತು ಮಕ್ಕಳೇ ತಯಾರಿಸಿದ ಚಿತ್ರಕಲೆ, ಗಾಳಿ ಪಟಗಳು ಗಮನ ಸಎಳೆದವು. ಪ್ರಸನ್ನ ಐವರ್ನಾಡು, ಕೃಷ್ಣಪ್ಪ ಬಂಬಿಲ, ಪದ್ಮನಾಭ ಬೆಳ್ಳಾರೆ, ಕೃಷ್ಣರಾಜ್, ರವಿ ವಿಟ್ಲ, ಕಾಳಿದಾಸ ಬಂಟ್ವಾಳ್, ನಿತಿನ್ ಹೊಸಂಗಡಿ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ತರಬೇತಿ ನೀಡಿದರು. ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಮಕ್ಕಳಾದ ರಂಜನ್ ಸಜ್ಜು, ಸಂಪತ್, ಪ್ರಕೃತಿ ಡಿ ಆಮೀನ್, ಜ್ಯೂನಿಯರ್ ಡ್ರಾಮಾ ಖ್ಯಾತಿಯ ಅನೂಪ್ ಮುಳ್ಳೇರಿಯ ಶಿಬಿರಕ್ಕೆ ಆಗಮಿಸಿದ್ದರು. ಸಂತೋಷ್‍ಕುಮಾರ್ ಮಂಗಳೂರು, ನಾಗೇಶ್ ಶೆಟ್ಟಿ ಸುಳ್ಯ ಮತ್ತು ತಂಡ ಶಿಬಿರವನ್ನು ಹಮ್ಮಿಕೊಂಡು ಗ್ರಾಮೀಣ ಮಕ್ಕಳಲ್ಲಿ ಸಂತಸವನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ.

Advertisement

ಹಸಿರೇ ಉಸಿರು- ಕಾಡು ಬೆಳೆಸಿ, ನಾಡು ಉಳಿಸಿ ಸಂದೇಶ:
ಬೆಳೆಯುವ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಬೇಕು ಎಂಬ ಉದ್ದೇಶದಿಂದ ಶಿಬಿರದ ಮೂಲಕ `ಹಸಿರೇ ಉಸಿರು-ಕಾಡು ಬೆಳಸಿ, ನಾಡು ಉಳಿಸಿ ಎಂಬ ಸಂದೇಶವನ್ನು ಸಾರಲಾಗುತ್ತದೆ. ಅದರಂತೆ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರಮಾಣ ಪತ್ರದ ಜೊತೆಗೆ ಒಂದೊಂದು ಗಿಡವನ್ನೂ ನೀಡಲಾಗುತ್ತದೆ. ಈ ಗಿಡವನ್ನು ಮಕ್ಕಳೇ ನೆಟ್ಟು ಬೆಳೆಸಬೇಕು ಎಂಬ ಸೂಚನೆಯನ್ನೂ ನೀಡಲಾಗುತ್ತದೆ. ಶಿಬಿರಕ್ಕೆ ಬಂದ ಅತಿಥಿಗಳಿಗೂ ಸ್ಮರಣಿಕೆಯಾಗಿ ಗಿಡಗಳನ್ನೇ ನೀಡಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯದಲ್ಲೊಂದು ಮಕ್ಕಳ ಕನಸು ಚಿಗುರುವ ಹಬ್ಬ ದೇಶ ಸೇವೆಯ ಕನಸು ಬಿತ್ತಿದ ಸೈನಿಕರ ಮಾತು"

Leave a comment

Your email address will not be published.


*