ಸುಳ್ಯ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಸುಳ್ಯ ಮತ್ತು ಕೇರಳದ ಕೊಟ್ಟಾರಕರೆ ಮಧ್ಯೆ ಬಸ್ ಸಂಚಾರ ಆರಂಭವಾಗಿದೆ. ಸುಳ್ಯದಿಂದ ಸಂಜೆ 5.30ಕ್ಕೆ ಹೊರಡುವ ಸೂಪರ್ ಡೀಲಕ್ಸ್ ಬಸ್ ಮುಳ್ಳೇರಿಯ, ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ತ್ರಿಶೂರ್, ಕೋಟ್ಟಾಯಂ ಮೂಲಕ ಬೆಳಿಗ್ಗೆ ಆರು ಗಂಟೆಗೆ ಕೊಟ್ಟಾರಕರೆ ತಲುಪಲಿದೆ. ಕೊಟ್ಟಾರಕರೆ ಯಿಂದ ಸಂಜೆ 5.25 ಕ್ಕೆ ಹೊರಡುವ ಬಸ್ ಕೊಟ್ಟಾಯಂ, ತ್ರಿಶೂರ್, ಕೋಝಿಕ್ಕಡ್, ಕಣ್ಣೂರು, ಕಾಞಂಗಾಡ್, ಕಾಸರಗೋಡು, ಮುಳ್ಳೇರಿಯ, ಪಂಜಿಕಲ್ಲು, ಜಾಲ್ಸೂರು ಮೂಲಕ ಬೆಳಿಗ್ಗೆ 6 ಗಂಟೆಗೆ ಸುಳ್ಯಕ್ಕೆ ಆಗಮಿಸಲಿದೆ. ಸುಳ್ಯದಿಂದ ಕೊಟ್ಟಾರಕರೆಗೆ ಬಸ್ ದರ 641. ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ಇದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel