ಸುಳ್ಯ: ಅಲ್ಲ ಮಾರಾಯ್ರೆ ಇದೆಂತ ಸುಳ್ಯದ ಕತೆ. ಅಲ್ಲಿ ನೋಡಿದ್ರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಲಂಚ ತೆಗೆಯುತ್ತಿರುವುದು ಬೆಳಕಿಗೆ ಬಂದಿದೆ.
ಇಲ್ಲಿ ನೋಡಿದ್ರೆ ನಗರ ಪಂಚಾಯತ್ ನಲ್ಲಿ ಮತ್ತೊಂದು ಸಮಸ್ಯೆ . ನೀರಿಲ್ಲ , ಬೀದಿ ದೀಪ ಸರಿ ಇಲ್ಲ ಅಂತ ಸದಸ್ಯರೊಬ್ಬರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸರಿ ಆಗುವುದು ಯಾವಾಗ ಮಾರ್ರೆ ಇದೆಲ್ಲಾ ? ಸರಿ ಆಗುತ್ತಾ ಅಂತ ಹತಾಶೆ ಪ್ರಶ್ನೆ ಕೇಳುವ ಮುನ್ನ ಸರಿಯಾಗಲಿ.
ಇವತ್ತೇನಾಯ್ತು ?
ನಗರ ಪಂಚಾಯತ್ ನ ಬೋರುಗುಡ್ಡೆ ವಾರ್ಡ್ ನಲ್ಲಿ ಕಳೆದ ಎರಡು ವಾರಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಬೀದಿ ದೀಪ ವ್ಯವಸ್ಥೆ ಸರಿ ಇಲ್ಲ. ಇದನ್ನು ಪ್ರತಿಭಟಿಸಿ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ನಗರ ಪಂಚಾಯತ್ ಗೆ ಆಗಮಿಸಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಎರಡು ವಾರಗಳಿಂದ ಜನರು ಮತ್ತು ಜನಪ್ರತಿನಿಧಿಗಳು ನಿರಂತರ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಪ್ರತಿಕ್ರಿಯೆ ಸಿಕ್ಕಿಲ್ಲ ಸಮಸ್ಯೆ ಪರಿಹಾರವಾಗಿಲ್ಲ ಎಂದು ಸೋಮವಾರ ಬೆಳಿಗ್ಗೆ ನಗರ ಪಂಚಾಯತ್ ಗೆ ಆಗಮಿಸಿದ ಉಮ್ಮರ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ತೀವ್ರ ತರಾಟಡಗೆತ್ತಿಕೊಂಡರು. ಇದರ ವೀಡಿಯೋ ವೈರಲ್ ಆಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಳ್ಯದ ಕತೆ ಎಂತ ಮಾರಾಯ್ರೆ ? ಇಲಾಖೆಗಳು ಸರಿ ಆಗುವುದು ಯಾವಾಗ ?"