ಸುಳ್ಯದ ‘ಶ್ರೀ ಇನ್ಫೋ’ದಲ್ಲಿ ದೀಪಾವಳಿಯ ಮೆಗಾ ಮೇಳ

October 27, 2019
8:48 PM

ಸುಳ್ಯ: ದೀಪಾವಳಿ ಎಂದರೆ ದೀಪಗಳ ಹಬ್ಬ ಎಂಬುದರ ಜೊತೆಗೆ ಶಾಫಿಂಗ್ ಹಬ್ಬವೂ ಹೌದು. ವಸ್ತ್ರ, ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳ ಖರೀದಿಗೆ ದೀಪಾವಳಿ ಸೂಕ್ತ ಸಮಯ. ಆದುದರಿಂದಲೇ ವ್ಯಾಪಾರ ಸಂಸ್ಥೆಗಳು, ಮಾರಾಟ ಮಳಿಗೆಗಳು ನವ ನವೀನ ವೈವಿಧ್ಯಮಯ ವಸ್ತುಗಳ ಶೇಖರಣೆಯೊಂದಿಗೆ, ಆಕರ್ಷಕ ದರ ಮತ್ತು ದರ ಕಡಿತದೊಂದಿಗೆ ಗ್ರಾಹಕರನ್ನು ಸೆಳೆಯುತ್ತವೆ. ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಇಲೆಕ್ಟ್ತಾನಿಕ್ಸ್ ಸಾಧನಗಳನ್ನು ಖರೀದಿಸುವ ಮನಸ್ಸು ಮಾಡಿದಲ್ಲಿ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿರುವ ಸತೀಶ್ ಕಾಟೂರು ಮಾಲಕತ್ವದ ‘ಶ್ರೀ ಇನ್ಫೋ’ಗೆ ಬರಬಹುದು.

Advertisement
Advertisement
Advertisement

 

Advertisement

ಹೊಸ ಹೊಸ ವಸ್ತುಗಳೊಂದಿಗೆ, ಆಕರ್ಷಕ ದರದಲ್ಲಿ ‘ಶ್ರೀ ಇನ್ಫೋ’ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ವಿವಿಧ ಕಂಪೆನಿಗಳ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಗಳು, ಸಿಸಿ ಕ್ಯಾಮರಾ, ಇನ್ವರ್ಟರ್ ಗಳು, ಯುಪಿಎಸ್, ಬ್ಯಾಟರಿಗಳು, ಟಿವಿ ಮತ್ತು ಮಲ್ಟಿ ಮೀಡಿಯ ಸಿಸ್ಟಂಗಳು ಮಳಿಗೆಯಲ್ಲಿ ಗ್ರಾಹಕರನ್ನು ಕಾಯುತಿದೆ. ದೀಪಾವಳಿ ಪ್ರಯುಕ್ತ ಮಾರಾಟ ಮೆಗಾ ಮೇಳವನ್ನು ಹಮ್ಮಿಕೊಂಡಿದ್ದು ಶೆ.15 ರಿಂದ ಶೆ.20 ರಷ್ಟು ದರ ಕಡಿತ ಮಾಡಿ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಅಕರ್ಷಕ ಗಿಪ್ಟ್ ಗಳನ್ನೂ ನೀಡಲಾಗುತ್ತದೆ. ಹೆಚ್.ಪಿ, ಡೆಲ್, ಆಸಸ್ ಮತ್ತಿತರ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಅಲ್ಲದೆ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಸರ್ವೀಸ್, ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಸರ್ವೀಸ್ ಕೂಡ ನೀಡಲಾಗುತ್ತದೆ. ನವೆಂಬರ್ ತಿಂಗಳ ಕೊನೆಯವರೆಗೆ ಮೆಗಾ ಮೇಳ ಮುಂದುವರಿಯಲಿದೆ ಎಂದು ಸತೀಶ್ ಕಾಟೂರು ತಿಳಿಸಿದ್ದಾರೆ. ‘ಶ್ರೀ ಇನ್ಫೋ’ ಸಂಸ್ಥೆ ಜಾಲ್ಸೂರಿನಲ್ಲಿಯೂ ಕಾರ್ಯಾಚರಿಸುತ್ತಿದ್ದು ಇಲ್ಲಿ ವೈವಿಧ್ಯಮಯ ಟಿವಿ ಮತ್ತು ಮಲ್ಟಿ ಮೀಡಿಯಾ ಸಿಸ್ಟಂಗಳು ಹಾಗು ಆಕರ್ಷಕ ಮೊಬೈಲ್ ಗಳು ಆಕರ್ಷಕ ದರದಲ್ಲಿ ಲಭ್ಯವಿದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 28.11.2024 | ರಾಜ್ಯದಲ್ಲಿ ಮುಂದುವರಿದ ಒಣಹವೆ | ನ.30ರಿಂದ ಮಳೆ ಸಾಧ್ಯತೆ |
November 28, 2024
12:09 PM
by: ಸಾಯಿಶೇಖರ್ ಕರಿಕಳ
ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ | 34.81 ಲಕ್ಷ ಮೆಟ್ರಿಕ್ ಟನ್ ಡಿಎಪಿ, 55 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆ ಪೂರೈಕೆ |
November 28, 2024
7:03 AM
by: The Rural Mirror ಸುದ್ದಿಜಾಲ
ಬೆಳಗಾವಿ ಭಾಗದ ರೈತರಿಗೆ 15 ದಿನಗಳ ವರೆಗೆ ಒಟ್ಟು 7.5 ಟಿಎಂಸಿ ನೀರು ಬಿಡುಗಡೆ
November 28, 2024
6:54 AM
by: The Rural Mirror ಸುದ್ದಿಜಾಲ
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ | ಸಂಸದ ಕೋಟಾ ಶ್ರೀನಿವಾಸ ಪೂಜಾರಿ
November 28, 2024
6:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror