ಸುಳ್ಯ ಎಂದರೆ ನಿರ್ಲಕ್ಷ್ಯವೋ……? ಅಥವಾ ಆ ಇಲಾಖೆಯೇ ನಿರ್ಲಕ್ಷ್ಯವೋ….?

June 14, 2020
1:09 PM

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಯಾರು ? ಅಥವಾ ಸುಳ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದಾ ? …ಹೀಗೊಂದು ಪ್ರಶ್ನೆ ಈಗ ಕಲ್ಮಡ್ಕ ಪರಿಸರದಲ್ಲಿ  ಕೇಳಿದೆ.

ಕಾರಣ ಇಷ್ಟೇ, ಇಲ್ಲಿ ಪಾಜಪಳ್ಳ -ಕುಕ್ಕುಜಡ್ಕ ರಸ್ತೆ ಅಭಿವೃದ್ದಿಯನ್ನು ಈಚೆಗೆ ಮಾಡಲಾಗಿದೆ. 5.80 ಕಿಮೀ ಉದ್ದದ ರಸ್ತೆಯನ್ನು 1.96 ಕೋಟಿ ರೂಪಾಯಿಯಲ್ಲಿ  ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ಮಾಹಿತಿ ನೀಡುವ ಸಲುವಾಗಿ ಫಲಕ ಹಾಕಲಾಗುತ್ತದೆ. ಇದರಲ್ಲಿ  ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಹೆಸರು ಉಲ್ಲೇಖಿಸಲಾಗಿದೆ.

ಕಣ್ತಪ್ಪಿನಿಂದ ಈ ಲೋಪವಾಗಿರಬಹುದು. ಆದರೆ ಕೋಟಿ ಅನುದಾನದ ಮಾಹಿತಿ ಫಲಕದಲ್ಲಿ  ಶಾಸಕರ ಹೆಸರೇ ಬದಲಾಗಿರುವುದು  ಇಲಾಖೆಯ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಬಹುತೇಕ ಕಾಮಗಾರಿಗಳಲ್ಲಿ, ಕೆಲಸಗಳಲ್ಲಿ  ಇಂತಹದ್ದೇ ಲೋಪಗಳು ಕೆಲವು ಇಲಾಖೆಗಳಿಂದ ಕಾಣುತ್ತದೆ. ಇದನ್ನು ಸುಳ್ಯದ ಸಜ್ಜನ  ಶಾಸಕ ಅಂಗಾರ ಅವರೂ ಪ್ರಶ್ನೆ ಮಾಡುವುದಿಲ್ಲ. ಹೀಗಾಗಿ ಕಾಮಗಾರಿಗಳೂ ಹೀಗೇ ನಡೆಯುತ್ತದೆ ಎಂದು ಜನರು ಹೇಳುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ
March 7, 2026
3:02 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ
March 7, 2026
2:12 PM
by: ಸಾಯಿಶೇಖರ್ ಕರಿಕಳ
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ
March 7, 2026
11:36 AM
by: ಮಿರರ್‌ ಡೆಸ್ಕ್
ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..
March 7, 2026
7:29 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror