ಸುಳ್ಯ ಎಸ್.ಎಸ್.ಎಫ್ ಡಿವಿಷನ್ ಕ್ಯೂ ಟೀಂ ವತಿಯಿಂದ ಸರಕಾರಿ ಆಸ್ಪತ್ರೆ ಆವರಣ ಸ್ವಚ್ಛತೆ

June 28, 2020
8:47 PM

ಸುಳ್ಯ.ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ಕ್ಯೂ ಟೀಂ ವತಿಯಿಂದ ಸುಳ್ಯ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದ ಪರಿಸರವನ್ನು 28 ರಂದು ಸ್ವಚ್ಛಗೊಳಿಸಲಾಯಿತು. ಬೆಳಗ್ಗೆ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಕರುಣಾಕರ ಕೆ.ವಿ ಚಾಲನೆ ನೀಡಿದರು.

ತಾಲೂಕು ಆಸ್ಪತ್ರೆಯ ಶವಾಗಾರದ ಪರಿಸರದಲ್ಲಿ ಶೇಖರಣೆಗೊಂಡಿದ್ದ ಕಸ ತ್ಯಾಜ್ಯಗಳನ್ನು ಜೆಸಿಬಿ ಯಂತ್ರದ ಮೂಲಕ ಅಲ್ಲಿಂದ ತೆಗೆಸಿ ಶುಚಿಗೊಳಿಸಲಾಯಿತು. ಆಸ್ಪತ್ರೆಯ ಮುಂಭಾಗದ ಮೂಲಕ ಶವಾಗಾರಕ್ಕೆ ತೆರಳುವ ದಾರಿ ಮತ್ತು ಆಸ್ಪತ್ರೆಯ ಸುತ್ತಮುತ್ತಲೂ ಬೆಳೆದಿದ್ದ ಕಾಡು ಕೊಳೆಗಳನ್ನು ಕಟಾವು ಯಂತ್ರದ ಮೂಲಕ ತೆರವುಗೊಳಿಸಲಾಯಿತು.

ಎಸ್. ಎಸ್. ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ, ದ.ಕ ಈಸ್ಟ್ ಝೋನ್ ಬ್ಲಡ್ ಸೈಬೋ ಉಸ್ತುವಾರಿ ಸಿದ್ದೀಖ್ ಗೂನಡ್ಕ, ಎಸ್.ವೈ.ಎಸ್ ನಾಯಕರುಗಳಾದ ಅಶ್ರಫ್ ಸಖಾಫಿ ಕುಂಬಕ್ಕೋಡು, ಹಸೈನಾರ್ ಗುತ್ತಿಗಾರು, ಸಂಶುದ್ದೀನ್ ಪಳ್ಳಿಮಜಲು ಮುಂತಾದವರ ನೇತೃತ್ವದಲ್ಲಿ ಸುಮಾರು ಮೂವತ್ತರಷ್ಟು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಕಾರ್ಯಕರ್ತರನ್ನು ಸುಳ್ಯ ನಗರ ಪಂಚಾಯತ್ ಸದಸ್ಯ ಉಮರ್ ಕೆ.ಎಸ್. ರವರು ಪಾಲ್ಗೊಂಡು ಮಾರ್ಗದರ್ಶನ ನೀಡಿ ಸಹಕರಿಸಿದರು.

ಎಸ್‌ಎಸ್‌ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹುದ್ದೀನ್ ಹಿಮಮಿ, ಕೆಸಿಎಫ್ ಅಬುಧಾಬಿ ಪಬ್ಲೀಕೇಶನ್ ಕನ್ವಿನರ್ ಕಬೀರ್ ಜಟ್ಟಿಪಳ್ಳ ಸ್ವಚತೆ ಬಗ್ಗೆ ಮಾಹಿತಿ ನೀಡಿದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |
March 17, 2025
3:33 PM
by: ಸಾಯಿಶೇಖರ್ ಕರಿಕಳ
ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...