ಸುಳ್ಯ: ರಾಜ್ಯದ ಯಾವುದೇ ಭಾಗದಲ್ಲಿ ನಾನು ಸುಳ್ಯದಿಂದ ವರ್ಗಾವಣೆಗೊಂಡು ಹೋದರು ಈ ಮಕ್ಕಳ ಮತ್ತು ಸಂಸ್ಥೆಯೊಂದಿಗೆ ನನ್ನನ್ನು ನಾನು ತೊಡಗಿಸಿಕೊಳ್ಳಲು ಸಿದ್ದನಿದ್ದೇನೆ ಎಂದು ತಹಶೀಲ್ದಾರ್ ಕುಂಞ ಅಹಮ್ಮದ್ ಹೇಳಿದರು.
ಸುಳ್ಯ ಸಾಂದೀಪನಿ ಶಾಲೆಯಲ್ಲಿ ಸುಳ್ಯ ಎಸ್ ಎಸ್ ಎಫ್ ಸಮಿತಿಯ ವತಿಯಿಂದ ನಡೆದ ಧ್ವಜದಿನದ ಅಂಗವಾಗಿ ನಡೆದ ರೀಚ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೇವಲ ಹಣಗಳಿಸಲು ಮತ್ತು ಸ್ವಾರ್ಥಕ್ಕಾಗಿ ಯೋಚಿಸಿ ಜೀವನ ನಡೆಸುವ ಈ ಕಾಲದಲ್ಲಿ ಪರರಿಗಾಗಿ ಮತ್ತು ಈ ರೀತಿಯ ಅಂಗವಿಕಲ ಮಕ್ಕಳಿಗಾಗಿ ದುಡಿಯುತ್ತಿರುವ ಸಂಸ್ಥೆಯ ಸ್ಥಾಪಕರಾದ ಎಂ ಬಿ ಸದಾಶಿವ ಮತ್ತು ಅವರಿಗೆ ಸಹಕರಿಸುತ್ತಿರುವ ಹರಿಣಿ ಸದಾಶಿವ ಅವರ ಕಾರ್ಯ ಚಟುವಟಿಕೆಗಳನ್ನು ಅವರು ಶ್ಲಾಘಿಸಿದರು.ಎಸ್ ಎಸ್ಎಫ್ ಸಮಿತಿಯ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಈ ರೀತಿಯ ವಿದ್ಯಾರ್ಥಿಗಳಿಗೆ ಸ್ಪಂದಿಸುವ ಕೆಲಸಕಾರ್ಯಗಳು ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಸ್ಥಾಪಕ ಅದ್ಯಕ್ಷ ಎ.ಬಿ ಅಸ್ಸನ್ ಫೈಝಿ,ಸಂಸ್ಥೆಯ ಸ್ಥಾಪಕ ಎಂಬಿ ಸದಾಶಿವ ರವರಿಗೆ ಶಾಲು ಹೊದಿಸಿ ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು.
ಸಮಿತಿಯ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ರಾಜ್ಯ ಸಮಿತಿಯ ಸದಸ್ಯ ಹಮೀದ್ ಬೀಜಕೊಚ್ಚಿ ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ಸೆಂಟರ್ ಎಸ್ ವೈ ಎಸ್ ಅದ್ಯಕ್ಷ ಎ.ಬಿ.ಅಶ್ರಫ್ ಸಅದಿ,ಉಮ್ಮರ್ ಹಾಜಿ ಗೂನಡ್ಕ,ಎ.ಎಂ.ಫೈಝಲ್ ಝುಹರಿ,ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಹರಿಣಿ ಸದಾಶಿವ ವಿದ್ಯಾರ್ಥಿಗಳಿಗೆ ನೀಡುವ ಪಾಠ ಪ್ರವಚನಗಳ ಬಗ್ಗೆ ಮಾಹಿತಿ ನೀಡಿದರು.
ಸ್ವಚ್ಛ ಸುಳ್ಯ ರೂವಾರಿ ವಿನೋದ್ ಲಸ್ರಾದೋ,ಲೋಕೇಶ್ ಗುಡ್ಡೆಮನೆ,ಶರೀಫ್ ಜಟ್ಟಿಪಳ್ಳ ರವರಿಗೆ ಸಮಿತಿಯ ವತಿಯಿಂದ ಈ ಸಂದರ್ಭದಲ್ಲಿ ಸಾಲು ಹೊದಿಸಿ ಸನ್ಮಾನಿಸಲಾಯಿತು.
ಎಸ್ ಎಸ್ ಎಫ್ ಬ್ಲಡ್ ಸೈಬೋ ನಾಯಕ ಸಿದ್ದೀಖ್ ಗೂನಡ್ಕ ಕಾರ್ಯಕ್ರಮ ಉದ್ಘಾಟಿಸಿ ಸ್ವಾಧಿಕ್ ಗೂನಡ್ಕ ಸ್ವಾಗತಿಸಿ ವಂದಿಸಿದರು.
ಎಸ್ ವೈ ಎಸ್ ಸುಳ್ಯ ಕಾರ್ಯದರ್ಶಿ ಅಂದುಞಿ ಗೋರಡ್ಕ,ಸುಳ್ಯ ರೀಜಿನಲ್ ಎಸ್ ಎಂ ಎ ಸಂಘಟನಾ ಕಾರ್ಯಧರ್ಶಿ ಹಸೈನಾರ್ ಜಯನಗರ,ಎಸ್ ಎಸ್ಎಫ್ ಸಮಿತಿಯ ಸದಸ್ಯರು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.