ಸುಳ್ಯ ಕಾಂಗ್ರೆಸ್ ಸಭೆಯಲ್ಲಿ ಆಂತರಿಕ ಕಲಹ ಸ್ಫೋಟ : ಸಭೆಯಿಂದ ಹೊರ ನಡೆಯಲು ಮುಂದಾದ ಜಿಲ್ಲಾಧ್ಯಕ್ಷರು

September 23, 2019
3:16 PM

ಸುಳ್ಯ: ಅ.2 ರಂದು ಮಂಗಳೂರಿನಲ್ಲಿ ನಡೆಯಲಿರುವ ಗಾಂಧಿ ನಡಿಗೆ ಕಾರ್ಯಕ್ರಮದ ಕುರಿತು ಚರ್ಚಿಸಲು ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಆಂತರಿಕ ಸಮಸ್ಯೆ ಸ್ಫೋಟಗೊಂಡು ನಾಯಕರ ಮಧ್ಯೆ ವಾಗ್ವಾದ, ಗದ್ದಲ ಉಂಟಾದ ಘಟನೆ ನಡೆಯಿತು. ಇದರಿಂದ ಅಸಮಾಧಾನಗೊಂಡು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಭೆಯಿಂದ ಹೊರ ನಡೆಯಲು ಮುಂದಾದ ಪ್ರಸಂಗಕ್ಕೂ ಸೋಮವಾರ ನಡೆದ ಸಭೆ ಸಾಕ್ಷಿಯಾಯಿತು.

Advertisement
Advertisement
Advertisement

ಅ. 2 ರಂದು ಮಂಗಳೂರಿನಲ್ಲಿ ನಡೆಯುವ ಗಾಂಧಿನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಸುಳ್ಯ ನಗರದ ಖಾಸಗೀ ಹೋಟೆಲ್ ಸಭಾಂಗಣದಲ್ಲಿ ನಡೆದಿತ್ತು. ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಮುಖಂಡರು ಹಾಗು ಸುಳ್ಯ ಬ್ಲಾಕ್ ನ ಎಲ್ಲಾ ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ “ಸುಬ್ರಹ್ಮಣ್ಯದಲ್ಲಿ ಹೂವಿನ ಸ್ಟಾಲ್ ಇರಿಸಿದ ಲಕ್ಷ್ಮಿ ಸುಬ್ರಹ್ಮಣ್ಯ ಅವರ ಹೂವಿನ ಸ್ಟಾಲನ್ನು ತೆರವು ಮಾಡಿರುವುದು ಸರಿಯಲ್ಲ. ದೇವಸ್ಥಾನದ ಆಡಳಿತ ಕಾಂಗ್ರೆಸ್ ಕೈಯಲ್ಲಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ ಎಂದು ದೂರಿದರು. ಅಲ್ಲದೆ ಕೆಲವು ಸಹಕಾರಿ ಸಂಘಗಳಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯವರ ಜೊತೆ ಒಳ ಒಪ್ಪಂದ ಮಾಡಿಕೊಂಡು ಗೆಲುವು ಸಾಧಿಸಿದ್ದಾರೆ” ಎಂದು ಆರೋಪಿಸಿದರು.

Advertisement

ಇದಕ್ಕೆ‌ ಸಭೆಯಲ್ಲಿ ವಿರೋಧ ವ್ಯಕ್ತವಾಗಿ ಸಭೆಯಲ್ಲಿ ಮಾತಿನ ಚಕಮಕಿ, ವಾಗ್ವಾದ ನಡೆದು ಗದ್ದಲದ ವಾತಾವರಣ ಉಂಟಾಯಿತು. ಗಾಂಧಿನಡಿಗೆ ಕುರಿತು ಮಾತ್ರ ಚರ್ಚಿಸಿ ಎಂದು ಜಿಲ್ಲಾಧ್ಯಕ್ಷರು ಮತ್ತು ಬ್ಲಾಕ್ ಅಧ್ಯಕ್ಷರು ಪದೇ ಪದೇ ವಿನಂತಿಸಿದರೂ ವಾಗ್ವಾದ ಮುಂದುವರಿದು ಸಭೆಯಲ್ಲಿ ಗದ್ದಲ, ಗೊಂದಲದ ವಾತಾವರಣ ಸೃಷ್ಠಿಯಾಯಿತು.

Advertisement

ಈ ಸಂದರ್ಭದಲ್ಲಿ ಅಸಮಾಧಾನಗೊಂಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಭೆಯಿಂದ ಹೊರ ನಡೆಯಲು ಮುಂದಾದರು. ನಾಯಕರು ಅವರನ್ನು ಸಮಾಧಾನಪಡಿಸಿದರು. ಸಭೆ ಮುಗಿದ ಬಳಿಕ ಕಾರ್ಯಕರ್ತರ ಅಹವಾಲು ನಾಯಕರ ಮುಂದೆ ಇರಿಸಲು ಅವಕಾಶ ನೀಡಲಾಗುವುದು ಎಂದು ಬ್ಲಾಕ್ ಅಧ್ಯಕ್ಷ ಜಯಪ್ರಕಾಶ್ ರೈ ಎಲ್ಲರನ್ನೂ ಸಮಾಧಾನಪಡಿಸಿದ ಬಳಿಕ ಸಭೆ ಮುಂದುವರಿಯಿತು.

ಸಭೆ ಮುಗಿದ ಬಳಿಕ ಪ್ರತ್ಯೇಕವಾಗಿ ಖಾಸಗೀ ಹೋಟೆಲ್ ನ ಕೊಠಡಿಯಲ್ಲಿ ನಾಯಕರ ಜೊತೆ ಅಹವಾಲು ಮಂಡಿಸಲು ಅವಕಾಶ ನೀಡಲಾಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.10 ರಿಂದ ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ
January 10, 2025
7:03 PM
by: The Rural Mirror ಸುದ್ದಿಜಾಲ
ರಾಸಾಯನಿಕ ಕೃಷಿಯಿಂದಾಗುವ ಪರಿಣಾಮಗಳ ಬಗ್ಗೆ ಭಾರತದ ರೈತರಲ್ಲೂ ಅರಿವು | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್
January 10, 2025
6:56 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಳ ಕುರಿತು ಅಧ್ಯಯನ ನಡೆಸುವಂತೆ  ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ
January 10, 2025
6:48 AM
by: The Rural Mirror ಸುದ್ದಿಜಾಲ
ನಕ್ಸಲರ ಶರಣಾಗತಿ ಹಿನ್ನೆಲೆ | ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆ
January 10, 2025
6:45 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror