ಸುಳ್ಯ ಗೃಹರಕ್ಷಕದಳ ಘಟಕಕ್ಕೆ ಜಿಲ್ಲಾ ಕಮಾಡೆಂಟ್ ಭೇಟಿ – ಪ್ರವಾಹ ರಕ್ಷಣಾ ತಂಡ ರಚನೆ

May 12, 2019
3:12 PM

ಸುಳ್ಯ: ಗೃಹರಕ್ಷಕ ದಳದ ದಕ್ಷಿಣ ಕನ್ನಡ ಜಿಲ್ಲಾ ಕಮಾಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು.

Advertisement
Advertisement
Advertisement

ನಂತರ ಕುಂದುಕೊರತೆಗಳ ಸಭೆ ನಡೆಸಿ ಮಾತನಾಡಿದ ಅವರು ಕೇರಳ ರಾಜ್ಯ ಹಾಗೂ ಕರ್ನಾಟಕ ರಾಜ್ಯ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಘಟಕದ ಎಲ್ಲಾ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಘಟಕಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಸರಕಾರದ ವತಿಯಿಂದ ಕೊಡಿಸುವ ಬಗ್ಗೆ ಭರವಸೆ ನೀಡಿದರು. ಅಲ್ಲದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಇತರ ಸರಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ತಲಾ 3 ತಿಂಗಳಿಗೊಮ್ಮೆ ಸೇವಾ ಕ್ಷೇತ್ರದಲ್ಲಿ ಕಡ್ಡಾಯವಾಗಿ ಬದಲಾವಣೆ ನೀತಿ ಜಾರಿಗೊಳಿಸಲಾಗುವುದು. ಇದು ಹೊಸತನಕ್ಕೂ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು

Advertisement

ಪ್ರವಾಹ ರಕ್ಷಣಾ ತಂಡ ರಚನೆ ಹಾಗೂ ಕಂಟ್ರೋಲ್ ರೂಂ ಸ್ಥಾಪನೆ:

ಮುಂಬರುವ ಮುಂಗಾರು ಮಳೆಗಾಲ ಸಮಯಕ್ಕೆ ಕರ್ತವ್ಯ ನಿರ್ವಹಿಸಲು ಗೃಹರಕ್ಷಕರ ಕಂಟ್ರೋಲ್ ರೂಂ ನ್ನು ಸುಳ್ಯ ಘಟಕದ ಕಚೇರಿಯಲ್ಲಿ ಸ್ಥಾಪನೆ ಮಾಡಿ ಎಂದು ಕಮಾಡೆಂಟ್ ರವರು ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ ಹಾಗೂ ಘಟಕದ ಸಾರ್ಜೆಂಟ್ ಅಬ್ದುಲ್ ಗಫೂರ್ ರವರಿಗೆ ಸೂಚಿಸಿದರು. ಮುಂಬರುವ ಮಳೆಗಾಲದ ಸಮಯದಲ್ಲಿ ಪ್ರಕೃತಿ ವಿಕೋಪ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಸುಳ್ಯ ಘಟಕದ ಗೃಹರಕ್ಷಕ ಸಿಬ್ಬಂದಿಗಳ ನುರಿತ ಪ್ರವಾಹ ರಕ್ಷಣಾ ತಂಡವನ್ನು ರಚಿಸಿದರು. ಗೃಹ ರಕ್ಷಕರು ಪ್ರಕೃತಿ ವಿಕೋಪ ಸಮಯದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ ಕಳೆದ ಬಾರಿ ಸುಳ್ಯದ ಜೋಡುಪಾಲ ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದ್ದು ಗೃಹರಕ್ಷಕ ಸಿಬ್ಬಂದಿ ಗಳು ಬಹಳ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಈ ಬಾರಿಯೂ ಯಾವುದೇ ಘಟನೆಗಳು ನಡೆದರೂ ಅದನ್ನು ಎದುರಿಸಲು ಪ್ರತಿಯೊಬ್ಬ ಗೃಹರಕ್ಷಕರು ಸಿದ್ಧತೆ ಯಿಂದ ಇರಲು ಮುರಳ ಕರೆ ನೀಡಿದರು ಈ ಸಂದರ್ಭದಲ್ಲಿ ಸುಳ್ಯ ಘಟಕದ ಘಟಕಾಧಿಕಾರಿ ಜಯಂತ ಶೆಟ್ಟಿ ಕಚೇರಿ ಕಾರ್ಯ ನಿರ್ವಾಹಕ ಅಬ್ದುಲ್ ಗಫೂರ್ ಕವಾಯತು ನಾಯಕರುಗಳಾದ ಕೆ ಅಶ್ವತ್ ಪ್ರಸಾದ್ ಬಿ ಗೋಪಾಲ್ ಪ್ರಭಾಕರ ಪೈ ಹಾಗೂ ಘಟಕದ ಎಲ್ಲಾ ಸಿಬ್ಬಂದಿಗಳು ಉಪಸ್ಥರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಮೇಲೆ ಕ್ಯಾನ್ಸರ್‌ ಅಪವಾದ | ಕ್ಲಿನಿಕಲ್‌ ಟ್ರಯಲ್‌ ಹೇಗೆ ಮಾಡುವುದು..? | ಪರಿಶುದ್ಧವಾದ ಅಡಿಕೆ ಯಾವುದು..?
November 27, 2024
7:40 AM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
November 27, 2024
7:03 AM
by: The Rural Mirror ಸುದ್ದಿಜಾಲ
ಖಾದಿಯನ್ನು ಬೆಂಬಲಿಸಿ-ಉಳಿಸಿ | ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನಕ್ಕೆ ಚಾಲನೆ
November 27, 2024
6:51 AM
by: The Rural Mirror ಸುದ್ದಿಜಾಲ
ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು  ಅಧಿಕಾರಿಗಳಿಗೆ ಸೂಚಿಸಲಾಗಿದೆ | ಸಚಿವ ಕೆ.ಎಚ್. ಮುನಿಯಪ್ಪ
November 27, 2024
6:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror