ಸುಳ್ಯ: ತಾಲೂಕಿನಲ್ಲಿ ಈ ವಾರ ಕಡಿಮೆ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಈಗಿನ ಪ್ರಕಾರ ಇನ್ನೂ 10 ದಿನಗಳ ಸುಳ್ಯ ತಾಲೂಕಿಗೆ ದೊಡ್ಡ ಮಳೆಯ ಮುನ್ಸೂಚನೆ ಇಲ್ಲ.
ಹವಾಮಾನ ಇಲಾಖೆ ಪ್ರಕಾರ ಜೂ.11 ರಿಂದ 15 ರವರೆಗೆ ಸರಾಸರಿಯಾಗಿ ಸುಳ್ಯದಲ್ಲಿ 64.9 ಮಿಮೀ ಮಳೆಯಾದರೆ, ಪುತ್ತೂರಿನಲ್ಲಿ 129.7 ಮಿಮೀ , ಬೆಳ್ತಂಗಡಿಯಲ್ಲಿ 219.7 ಮಿಮೀ, ಬಂಟ್ವಾಳದಲ್ಲಿ 194.1 ಮಿಮೀ, ಮಂಗಳೂರಿನಲ್ಲಿ 231.4 ಮಿಮೀ ಮಳೆಯಾಗಲಿದೆ. ಹೀಗಾಗಿ ಪ್ರತೀ ಬಾರಿ ಸುಳ್ಯದಲ್ಲಿ ಅಧಿಕ ಮಳೆಯಾಗುತ್ತಿದ್ದರೆ ಈ ವಾರ ಮಂಗಳೂರಿನಲ್ಲಿ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳುತ್ತದೆ.
ನಿನ್ನೆ ಕೊಲ್ಲಮೊಗ್ರದಲ್ಲಿ 7 ಮಿಮೀ , ಕಲ್ಲಾಜೆಯಲ್ಲಿ 10 ಮಿಮೀ ಮಳೆ , ಹಾಲೆಮಜಲು- ಗುತ್ತಿಗಾರಿನಲ್ಲಿ 9 ಮಿಮೀ , ಕಡಬದಲ್ಲಿ 18 ಮಿಮೀ , ಬಾಳಿಲದಲ್ಲಿ 10 ಮಿಮೀ ಮಳೆಯಾಗಿದೆ.
ಇಂದು ಕೊಲ್ಲಮೊಗ್ರದಲ್ಲಿ 7 ಮಿಮೀ ಮಳೆಯಾದರೆ ಕಲ್ಲಾಜೆಯಲ್ಲಿ 43 ಮಿಮೀ ಮಲೆಯಾಗಿದೆ. ಗುತ್ತಿಗಾರು- ಹಾಲೆಮಜಲಿನಲ್ಲಿ 15 ಮಿಮೀ ಮಳೆಯಾಗಿದೆ. ಉರುವಾಲಿನಲ್ಲಿ 43 ಮಿಮೀ ಮಳೆಯಾಗಿದೆ.