ಸುಳ್ಯ ನ ಪಂ ಚುನಾವಣಾ ಫಲಿತಾಂಶ : ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು

Advertisement

ಸುಳ್ಯ: ನ ಪಂ ಚುನಾವಣಾ ಮತ ಎಣಿಕೆ ಮುಗಿದಿದೆ. ಬಿಜೆಪಿ ಅಭ್ಯರ್ಥಿಗಳು 14 ಸ್ಥಾನಗಳಲ್ಲಿ  ಗೆಲುವು ಸಾಧಿಸಿ ಬಹುಮತದೊಂದಿಗೆ ನಗರ ಪಂಚಾಯತ್ ಅಧಿಕಾರವನ್ನು ಸತತ 4 ನೇ ಬಾರಿಗೆ ಪಡೆದುಕೊಂಡಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಸಂಭ್ರಮದಲ್ಲಿದ್ದಾರೆ. ಸಂತಸವನ್ನು  ಹಂಚಿಕೊಳ್ಳುತ್ತಿದ್ದಾರೆ.

Advertisement

ಮತ ಎಣಿಕೆ ಕೇಂದ್ರವಾದ ಸುಳ್ಯ ನೆಹರೂ ಸ್ಮಾರಕ ಕಾಲೇಜಿನ ಮುಂಭಾಗದಲ್ಲಿ ಎಲ್ಲಾ ಪಕ್ಷಗಳ ಕಾರ್ಯಕರ್ತರು ಆಗಮಿಸಿದ್ದರು. ಮತ ಎಣಿಕೆ ಮುಗಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.   ಈ ಬಾರಿ ಹೊಸಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿ ಹೊಸದೊಂದು ಪ್ರಯೋಗ ಮಾಡಿತ್ತು . ಇದರಲ್ಲಿ ಯಶಸ್ಸು ಕಂಡಿದೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ : 

ಆದರೆ ರಾಜ್ಯದಲ್ಲಿ  ಒಟ್ಟು ಸ್ಥಳೀಯಾಡಳಿತ ಚುನಾವಣೆಯಲ್ಲಿ  ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.  ಒಟ್ಟು 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29 ರಂದು ನಡೆದ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.  ನಗರಸಭೆಯ 217 ವಾರ್ಡ್ ಗಳಲ್ಲಿ ಬಿಜೆಪಿ 28, ಕಾಂಗ್ರೆಸ್ 41, ಜೆಡಿಎಸ್ 21, ಇತರರು 16ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪುರಸಭೆಯ 717 ವಾರ್ಡ್ ಗಳಲ್ಲಿ 119 ರಲ್ಲಿ ಬಿಜೆಪಿ, 251ರಲ್ಲಿ ಕಾಂಗ್ರೆಸ್ ಮತ್ತು 75 ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ.  ಪಟ್ಟಣ ಪಂಚಾಯತ್ ನ  290 ವಾರ್ಡ್ ಗಳಲ್ಲಿ 117 ರಲ್ಲಿ ಬಿಜೆಪಿ, 78 ರಲ್ಲಿ ಕಾಂಗ್ರೆಸ್, 27 ರಲ್ಲಿ ಜೆಡಿಎಸ್ ಮತ್ತು ಇತರರು 29 ರಲ್ಲಿ ಮುನ್ನಡೆ ಸಾಧಿಸಿದ್ದಾರೆ.

Advertisement

ರಾಜ್ಯದಲ್ಲಿ  ಒಟ್ಟು  4360 ಮಂದಿ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ 1125 ಮಂದಿ, ಬಿಜೆಪಿಯಿಂದ 1125 ಮಂದಿ ,  ಜೆಡಿಎಸ್ ನಿಂದ 780 ಮಂದಿ ಕಣದಲ್ಲಿದ್ದಾರೆ.ಪಕ್ಷೇತರರಾಗಿ 1056 ಮಂದಿ ಕಣದಲ್ಲಿ ಇದ್ದಾರೆ.

 

Advertisement

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯ ನ ಪಂ ಚುನಾವಣಾ ಫಲಿತಾಂಶ : ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು"

Leave a comment

Your email address will not be published.


*