ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಆರಂಭಗೊಂಡಿದೆ. ಸುಳ್ಯ ನಗರ ಪಂಚಾಯತ್ ನಲ್ಲಿ ಚುನಾವಣಾಧಿಕಾರಿಗಳ ಕಚೇರಿ ತೆರೆಯಲಾಗಿದೆ. ಬುಧವಾರ ನಾಮಪತ್ರ ಸಲ್ಲಿಸಲು ಹಲವು ಮಂದಿ ಅರ್ಜಿಗಳನ್ನು ಪಡೆದು ಕೊಂಡು ಹೋಗುತ್ತಿದ್ದರು. ಪ್ರಥಮ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಏನೇನು ದಾಖಲೆ ಬೇಕು:
ನಾಮ ಪತ್ರ ಸಲ್ಲಿಸುವ ಅಭ್ಯರ್ಥಿಗಳು ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ನಾಮಪತ್ರ -1 ಪ್ರತಿ, ಘೋಷಣಾ ಪತ್ರ -2 ಮೂಲಪ್ರತಿ, ಒಂದು ಜೆರಾಕ್ಸ್ ಪ್ರತಿ(ರೂ.20 ಸ್ಟಾಂಪ್ ಪೇಪರ್ ನಲ್ಲಿ), ಮೀಸಲು ಕ್ಷೇತ್ರವಾದರೆ ಜಾತಿ ಪ್ರಮಾಣ ಪತ್ರ, 3 ಭಾವಚಿತ್ರಗಳು, ಮಾದರಿ ಸಹಿ ಇರುವ ಪ್ರಮಾಣಪತ್ರ, ಪಕ್ಷದಿಂದ ಸ್ಪರ್ಧಿಸುವುದಾದರೆ ‘ಬಿ’ ಫಾರ್ಮ್, ಪಕ್ಷೇತರನಾಗಿ ಸ್ಪರ್ಧಿಸುವುದಾದರೆ ‘ಸಿ’ಫಾರ್ಮ್ ಸಲ್ಲಿಸಬೇಕು. ಠೇವಣಿ ಸಾಮಾನ್ಯ ಕ್ಷೇತ್ರಕ್ಕೆ ರೂ.1000, ಹಿಂದುಳಿದ ವರ್ಗ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ,ಮಹಿಳೆ ಆದರೆ ರೂ.500 ಪಾವತಿಸಬೇಕು. ನಾಮಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ವಿವರ ಪತ್ರ ಸಲ್ಲಿಸಬೇಕು.
ಆಯಾ ವಾರ್ಡಿನ ಸೂಚಕರು:
ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಯಾಗಿದ್ದಲ್ಲಿ ಒಬ್ಬರು ಸೂಚಕರು, ಪಕ್ಷೇತರ ಅಭ್ಯರ್ಥಿ ಯಾಗಿದ್ದಲ್ಲಿ ಮೂರು ಜನ ಸೂಚಕರು ಬೇಕು. ಅಭ್ಯರ್ಥಿಗೆ ಯಾವ ವಾರ್ಡಿನಲ್ಲಿ ಬೇಕಾದರೂ ಸ್ಪರ್ಧಿಸಬಹುದು ಆದರೆ ಸೂಚಕರು ಆಯಾ ವಾರ್ಡಿನವರೇ ಇರಬೇಕು.
ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗಳಿಂದ ಪಡೆದು ಪ್ರಮಾಣಪತ್ರದ ಶುಲ್ಕ ನೀಡಿ ಬ್ಯಾಂಕ್ ಗಳಿಂದ ಪಡೆದ ದಸ್ತಾವೇಜು ಹಾಳೆಯಲ್ಲಿ ಪ್ರಮಾಣೀಕರಿಸಬೇಕು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಳ್ಯ ನ.ಪಂ.ಚುನಾವಣೆ: ಪ್ರಥಮ ದಿನ ನಾಮಪತ್ರ ಸಲ್ಲಿಕೆ ಇಲ್ಲ"