ಸುಳ್ಯ: ನಗರ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದ್ದು ಆಮ್ ಆದ್ಮಿ ಪಾರ್ಟಿ ಈ ಬಾರಿಯ ಚನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. 20 ವಾರ್ಡ್ ಗಳ ಪೈಕಿ 5 AAP ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಬೋರುಗುಡ್ಡೆ ವಾರ್ಡ್ ನಲ್ಲಿ ರಶೀದ್ ಜಟ್ಟಿಪಳ್ಳ, ಬೀರಮಂಗಲ ವಾರ್ಡ್ ನಲ್ಲಿ ಡಿ.ಎಂ.ಶಾರೀಖ್, ಭಸ್ಮಡ್ಕ ವಾರ್ಡ್ ನಲ್ಲಿ ರಾಮಕೃಷ್ಣ ಬೀರಮಂಗಲ, ನಾವೂರು ವಾರ್ಡ್ ನಲ್ಲಿ ಖಲಂದರ್ ಶಾ, ಕೊಯಿಂಗೋಡಿ-ಕುದ್ಪಾಜೆ ವಾರ್ಡ್ ನಲ್ಲಿ ದೀಕ್ಷಿತ್ ಜಯನಗರ ಸಂಭಾವ್ಯ ಅಭ್ಯರ್ಥಿಗಳು.
ಉಳಿದ ವಾರ್ಡ್ ಗಳಲ್ಲಿ ಜನಪರ ಮತ್ತು ಭ್ರಷ್ಟಾಚಾರ ರಹೀತ ಆಡಳಿತದ ಧ್ಯೇಯದೊಂದಿಗೆ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿ ಗಳಿಗೆ ಬೆಂಬಲ ನೀಡಲು ಪಕ್ಷ ನಿರ್ಧರಿಸಿದೆ ಎಂದು ಆಮ್ ಆದ್ಮಿ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel