ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಪ್ರಮುಖರು ಗೆಲುವು ಸಾಧಿಸಿದ್ದಾರೆ. ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕೇರಿ, ನ.ಪಂ.ಮಾಜಿ ಸದಸ್ಯರಾದ ಕೆ.ಎಸ್.ಉಮ್ಮರ್, ಸರೋಜಿನಿ ಪೆಲ್ತಡ್ಕ, ಮಾಜಿ ನಾಮನಿರ್ದೇಶಿತ ಸದಸ್ಯೆ ಶಶಿಕಲಾ ಎ., ನಿವೃತ್ತ ಶಿಕ್ಷಕ ಬುದ್ಧ ನಾಯ್ಕ ಆಯ್ಕೆಯಾದ ಪ್ರಮುಖರು.
ಪರಾಜಿತರಾದ ಪ್ರಮುಖರು:
ನ.ಪಂ.ಚುನಾವಣೆಯಲ್ಲಿ ಪರಾಜಿತರ ಪಟ್ಟಿಯಲ್ಲಿಯೂ ಪ್ರಮುಖರು ಸೇರಿಕೊಂಡಿದ್ದಾರೆ. ಮಾಜಿ ಸದಸ್ಯರಾದ ಕೆ.ಎಂ.ಮುಸ್ತಫಾ, ಕೆ.ಗೋಕುಲ್ ದಾಸ್, ಪ್ರೇಮ ಟೀಚರ್, ಶ್ರೀಲತಾ ಪ್ರಸನ್ನ, ಜೂಲಿಯಾ ಕ್ತಾಸ್ತಾ,, ಬಿಜೆಪಿ ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ಹರೀಶ್ ಬೂಡುಪನ್ನೆ, ಬೂಡು ರಾಧಾಕೃಷ್ಣ ರೈ, ಅಬ್ದುಲ್ ಕಲಾಂ, ಆರ್.ಕೆ.ಮಹಮ್ಮದ್, ಪರಾಭವಗೊಂಡರು.
ಆರನೇ ಬಾರಿಯ ಸ್ಫರ್ಧೆಯಲ್ಲಿ ಕೆ.ಎಂ. ಮುಸ್ತಫಾ ಗೆ ಸೋಲು:
ಆರನೇ ಬಾರಿ ಸ್ಪರ್ಧೆ ನಡೆಸಿದ ಕೆ.ಎಂ.ಮುಸ್ತಫಾ ಈ ಬಾರಿ 17ನೇ ವಾರ್ಡ್ ನಲ್ಲಿ ಪರಾಜಿತರಾಗಿದ್ದಾರೆ. ಕಳೆದ ಐದು ಬಾರಿ ಗೆದ್ದು ನಗರ ಪಂಚಾಯತ್ ಸದಸ್ಯರಾಗಿದ್ದ ಮುಸ್ತಫಾ ಆರನೇ ಸ್ಪರ್ಧೆಯಲ್ಲಿ ಎಡವಿದರು. ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ, ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ನಡೆದ ಚತುಷ್ಕೋನ ಸ್ಪರ್ಧೆಯಲ್ಲಿ ಮುಸ್ತಫಾ 15 ಮತಗಳ ಅಂತರದಲ್ಲಿ ಎರಡನೇ ಸ್ಥಾನಿಯಾದರು.