ಸುಳ್ಯ ನ ಪಂ ಸ್ಥಾನದಲ್ಲಿ ಕುಸಿದ ಕಾಂಗ್ರೆಸ್ ಪ್ರಾಬಲ್ಯ

Advertisement

ಸುಳ್ಯ: ಸುಳ್ಯ ನಗರ ಪಂಚಾಯತ್ ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮತ್ತೆ ಕುಸಿದಿದೆ. ಕಳೆದ ಬಾರಿ 18 ಸ್ಥಾನಗಳಿದ್ದ ಸಂದರ್ಭದಲ್ಲಿ 5 ಸ್ಥಾನ ಪಡೆದಿದ್ದ ಕಾಂಗ್ರೆಸ್ ವಾರ್ಡ್ ಗಳ ಸಂಖ್ಯೆ 20 ಕ್ಕೆ ಏರಿದಾಗ ಕೇವಲ ನಾಲ್ಕು ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿ ಬಂದಿದೆ.

Advertisement

ಆರು ಮಂದಿ ಮಾಜಿ ಸದಸ್ಯರು ಸ್ಪರ್ಧೆ ಮಾಡಿದಲ್ಲಿ ಒಬ್ಬರು ಮಾತ್ರ ಗೆದ್ದಿದ್ದಾರೆ. ಎಂ.ವೆಂಕಪ್ಪ ಗೌಡ 12ನೇ ವಾರ್ಡ್ ನಿಂದ ಗೆಲುವು ಸಾಧಿಸಿದ್ದರೆ ಸ್ಪರ್ಧಿಸಿದ ಮಾಜಿ ಸದಸ್ಯರಲ್ಲಿ ಕೆ.ಎಂ.ಮುಸ್ತಫಾ, ಪ್ರೇಮ ಟೀಚರ್, ಕೆ.ಗೋಕುಲ್ ದಾಸ್, ಜೂಲಿಯಾ ಕ್ರಾಸ್ತಾ, ಶ್ರೀಲತಾ ಪ್ರಸನ್ನ ಸೋಲು ಕಂಡಿದ್ದಾರೆ. 14 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಇದರಲ್ಲಿ ಮೂರನೇ ವಾರ್ಡ್ ನಿಂದ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕೇರಿ, 6ನೇ ವಾರ್ಡ್ ನಿಂದ ಧೀರಾ ಕ್ರಾಸ್ತಾ, 15ನೇ ವಾರ್ಡ್ ನಿಂದ ಮಹಮ್ಮದ್ ಶರೀಫ್ ಕಂಠಿ ಗೆಲುವು ಸಾಧಿಸಿದ್ದಾರೆ. ಉಳಿದ 11ಮಂದಿ ಪರಾಭವಗೊಂಡರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಳ್ಯ ನ ಪಂ ಸ್ಥಾನದಲ್ಲಿ ಕುಸಿದ ಕಾಂಗ್ರೆಸ್ ಪ್ರಾಬಲ್ಯ"

Leave a comment

Your email address will not be published.


*