ಸುಳ್ಯ: ಸುಳ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಧಿಕಾರಿಯೊಬ್ಬರು ಹಣ ಕೇಳುವ ಹಾಗೂ ಹಣ ಪಡೆಯುವ ವಿಡಿಯೋ ಗಮನಿಸಿದ್ದೇವೆ. ಕೃಷಿಕರೂ ಸೇರಿದಂತೆ ಬಹುತೇಕ ಜನಸಾಮಾನ್ಯರಿಗೆ ಹೆಚ್ಚಿನ ಕೆಲಸಗಳು ಇರುವ ಇಂತಹ ಸರಕಾರಿ ಕಚೇರಿಯಲ್ಲಿ ಈ ರೀತಿ ರಾಜಾರೋಷವಾಗಿ ಲಂಚ ಪಡೆಯುವುದನ್ನು ಖಂಡಿಸಲಾಗುತ್ತದೆ. ತಕ್ಷಣವೇ ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಕ್ರಮಕೈಗೊಳ್ಳಲು ಒತ್ತಾಯ ಮಾಡುತ್ತೇವೆ. ಇಂತಹ ಅಧಿಕಾರಿಗಳನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸುಳ್ಯನ್ಯೂಸ್.ಕಾಂ ಗೆ ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel