ಸುಳ್ಯ : ವಿಶ್ವ ಸಾಕ್ಷರತಾ ದಿನಾಚರಣೆ

September 12, 2019
9:30 AM

ಸುಳ್ಯ:ಶಿಕ್ಷಣ ಮನುಷ್ಯನಿಗೆ  ಯೋಜನಾಬದ್ಧವಾಗಿ ಯೋಚಿಸುವ ಶಕ್ತಿಯನ್ನು ನೀಡಬೇಕು ಮತ್ತು ಶಿಕ್ಷಣದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮನುಷ್ಯ ಬೆಳೆಯಬೇಕು ಎಂದು  ನೆಹರು ಮೆಮೋರಿಯಲ್ ಪದವಿ   ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಅವರು ಹೇಳಿದರು.

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಮಾನವಿಕ ಸಂಘ ಆಯೋಜಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆಯ   ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ನಮಗೆ ನಿಜವಾಗಿ ಬೇಕಾಗಿರುವುದು ಬದುಕಿನ ಶಿಕ್ಷಣ, ಅಂಕಗಳ ಆಕಾಂಕ್ಷೆ ಮತ್ತು ಸ್ಪರ್ಧೆಯನ್ನು ಮೀರಿ ಬೆಳೆದಾಗ ಮತ್ತು ನಮ್ಮ ಯೋಚನಾ ಲಹರಿ ಸರಿ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ನಾವು ಪಡೆದ ಶಿಕ್ಷಣಕ್ಕೆ  ಸಾರ್ಥಕತೆ ಇರುತ್ತದೆ  ಎಂದು  ನುಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ  ಹರಿಣಿ ಪುತ್ತೂರಾಯರವರು ಮಾತನಾಡಿ  ಈ ವರುಷದ ವಿಶ್ವ ಸಾಕ್ಷರತಾ ದಿನಾಚರಣೆಯ ಧ್ಯೇಯವನ್ನು ನೆನಪಿಸಿಕೊಂಡು ನಮ್ಮ ಶಿಕ್ಷಣ  ಬಹುಭಾಷಾ ಸಿದ್ದಾಂತದ ಮೇಲೆ ಮುನ್ನಡೆಯುವ ಅಗತ್ಯತೆ ಇದೆ. ಜಾಗತೀಕರಣ  ಪ್ರಪಂಚದ ಸವಾಲುಗಳನ್ನು ಎದುರಿಸಲು ನಾವು ಪಡೆಯುವ  ಶಿಕ್ಷಣ ದಾರಿ ಮಾಡಿಕೊಡಬೇಕು ಎಂದು   ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಲಾವಿಭಾಗದ ಉಪನ್ಯಾಸಕರಾದರೇಷ್ಮಾ ಮತ್ತು  ಜಾನಕೀ ಅವರು ಉಪಸ್ಥಿತರಿದ್ದರು.

ಕಲಾ ವಿಭಾಗದ ವಿದ್ಯಾರ್ಥಿಗಳು ವೈಯಕ್ತಿಕ ಗೀತೆ, ಸಮೂಹ ಗೀತೆ ಮತ್ತು ಸಾಕ್ಷರತಾ ದಿನದ ಸಲುವಾಗಿ  ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳಾದ ಧನ್ಯ ಶ್ರೀ   ಸ್ವಾಗತಿಸಿ,  ಸಮೀಕ್ಷಾ ವಂದಿಸಿದರು. ವಿದ್ಯಾರ್ಥಿ ರವಿ  ಕಾರ್ಯಕ್ರಮ ನಿರ್ವಹಿಸಿದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ
September 28, 2026
10:20 PM
by: ದ ರೂರಲ್ ಮಿರರ್.ಕಾಂ
ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!
September 28, 2026
9:05 PM
by: ದ ರೂರಲ್ ಮಿರರ್.ಕಾಂ
₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
September 28, 2026
2:31 PM
by: ದ ರೂರಲ್ ಮಿರರ್.ಕಾಂ
ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ
September 28, 2026
1:43 PM
by: ಮಿರರ್‌ ಡೆಸ್ಕ್‌

You cannot copy content of this page - Copyright -The Rural Mirror