ಸೆ.15: ಕನ್ಯಾಡಿ ಸೇವಾಧಾಮದ ಪ್ರಥಮ ವಾರ್ಷಿಕೋತ್ಸವ

September 10, 2019
12:00 PM

ಬೆಳ್ತಂಗಡಿ: ಸೇವೆಯೇ ಪರಮಧರ್ಮ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕನ್ಯಾಡಿ ಸೇವಾ ಭಾರತಿಯ ಅಂಗ ಸಂಸ್ಥೆಯಾಗಿರುವ ಸೇವಾಧಾಮವು ಪ್ರಥಮ ವಾರ್ಷಿಕೋತ್ಸವನ್ನು ಸೆ. 15 ರಂದು ಆಚರಿಸಲಿದೆಎಂದು ಸೇವಾಧಾಮದ ಸಂಯೋಜಕಕೆ. ಪುರಂದರರಾವ್ ತಿಳಿಸಿದರು.

Advertisement
Advertisement
Advertisement

ಅವರು ಸೋಮವಾರ ಕನ್ಯಾಡಿ ಸೇವಾಭಾರತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು. ಕೊಕ್ಕಡದಲ್ಲಿರುವ ಸೇವಾಧಾಮದ ಚಟುವಟಿಕೆಗಳನ್ನು ವಿವರಿಸಿದರು.
ಕಳೆದ ವರ್ಷ ಕೊಕ್ಕಡದ ಸೌತಡ್ಕಶ್ರೀ ಮಹಾಗಣಪತಿದೇವಸ್ಥಾನ ಸನಿಹದಲ್ಲಿ ಬೆನ್ನುಮೂಳೆ ಮುರಿತಗೊಂಡವರಿಗೆ ಸೇವಾಧಾಮ ಎಂಬ ಪುನಶ್ಚೇತನ ಕೇಂದ್ರವನ್ನು ಆರಂಭಿಸಲಾಯಿತು. ಈ ಕೇಂದ್ರದಲ್ಲಿ ಬೆನ್ನುಮೂಳೆ ಮುರಿತಗೊಂಡವರನ್ನು ಪುನಶ್ಚೇತನಗೊಳಿಸಿ, ಅವರಲ್ಲಿಆತ್ಮವಿಶ್ವಾಸ ತುಂಬಿಸಿ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳುವಂತೆ ಇಲ್ಲಿ ಶಿಕ್ಷಣ ಮಾಹಿತಿ ನೀಡಲಾಗುತ್ತಿದೆ. ಇವರಲ್ಲಿ ಬಹಳಷ್ಟು ಮಂದಿ ಕೃಷಿ ಕಾರ್ಮಿಕರು ಹಾಗೂ ಆರ್ಥಿಕವಾಗಿದುರ್ಬಲರು ಮತ್ತು ಸರಕಾರಿ ಸೌಲಭ್ಯಗಳಿಂದಲೂ ವಂಚಿತರಾದವರಿದ್ದು ಕೇಂದ್ರಅವರಿಗೆ ಆಶಾಕಿರಣವಾಗಿದೆ ಎಂದರು.

Advertisement

ಇದುವರೆಗೆ ಒಂದು ವರ್ಷದಲ್ಲಿ ದ.ಕ., ಉಡುಪಿ, ಕೊಡಗು, ಚಿಕಮಗಳೂರು, ಹಾಸನ ಮತ್ತುಕಾಸರಗೋಡು ಜಿಲ್ಲೆಗಳ 12 ತಾಲೂಕಿನ 178 ಮಂದಿನ ಬೆನ್ನುಮೂಳೆ ಮುರಿತಕ್ಕೊಳಗಾದವರನ್ನು ಗುರುತಿಸಲಾಗಿದೆ. 42 ಮಂದಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಸಂಸ್ಥೆವತಿಯಿಂದ ಬೆಳ್ತಂಗಡಿ, ಪುತ್ತೂರು, ಮೂಡಬಿದರೆ ಸುಳ್ಯಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದೇವೆ. 31 ಅಶಕ್ತರಿಗೆ ಗಾಲಿ ಕುರ್ಚಿಗಳನ್ನು, 20 ಮಂದಿಗೆ ಕ್ಯಾಲಿಪರ್‍ಗಳನ್ನು 15 ಮಂದಿಗೆ ವಾಕರ್‍ಗಳನ್ನು, 11 ಮಂದಿಗೆ ರ್ಯಾಂಪ್, ಶೌಚದ ಉಪಕರಣಗಳನ್ನು ನೀಡಲಾಗಿದೆ. ಪುನಶ್ಚೇತನಗೊಂಡವರಲ್ಲಿ ನಾಲ್ಕು ಮಂದಿ ಉದ್ಯೋಗಗಳನ್ನು ನಡೆಸುತ್ತಿದ್ದಾರೆ. ಸೇವಾಧಾಮದ ಕಾರ್ಯಗಳಿಗೆ ಸೌತಡ್ಕದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‍ನವರು ಕಟ್ಟಡವನ್ನುಉಚಿತವಾಗಿ ನೀಡಿ ಸಹಕರಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಬೆಂಗಳೂರು, ಕೊಪ್ಪಳ, ಮಾಗಡಿಯಲ್ಲಿಇಂತಹ ಕೇಂದ್ರಗಳಿದ್ದು, ಸೌತಡ್ಕದ್ದು ನಾಲ್ಕನೇಯ ಕೇಂದ್ರವಾಗಿದೆ. ಅಸೋಸಿಯೇಶನ್ ಆಫ್ ಪೀಪಲ್ ವಿದ್‍ಡಿಸೆಬಿಲಿಟಿ (ಎಪಿಡಿ) ಎಂಬ ಸ್ವಯಂಸೇವಾ ಸಂಸ್ಥೆ ನಮ್ಮಕೇಂದ್ರಕ್ಕೆತಾಂತ್ರಿಕವಾಗಿ, ನೈತಿಕವಾಗಿ ಮತ್ತು ಆರ್ಥಿಕವಾಗಿ ಸಹಕಾರ ನೀಡುತ್ತಿದೆ. ಇವರ ಒಂದು ಕೇಂದ್ರ ಬೆಂಗಳೂರಿನಲ್ಲಿದೆ. ಸೇವಾಧಾಮವು 5 ಹಾಸಿಗೆಯಿಂದ ಆರಂಭವಾಗಿದ್ದು ಇದೀಗ 10 ಹಾಸಿಗೆಗಳನ್ನೊಳಗೊಂಡಿದೆ ಎಂದರು.

Advertisement

ಪೂರಕ ಮಾಹಿತಿ ನೀಡಿದ ಸೇವಾಭಾರತಿ ಅಧ್ಯಕ್ಷ ಕೆ. ವಿನಾಯಕರಾವ್‍ ಅವರು ಕೇಂದ್ರದಲ್ಲಿ ಇರುವರಿಗೆ ಮಾನಸಿಕ, ದೈಹಿಕ ಸ್ಥಿರತೆಗಾಗಿ ಯೋಗ ಇನ್ನಿತರ ಶಿಕ್ಷಣವನ್ನು ನೀಡಲಾಗುತ್ತಿದೆ. ಮುಂದಿನ ಬದುಕಿಗೆ ಧೈರ್ಯ, ಭರವಸೆ, ಆತ್ಮವಿಶ್ವಾಸವನ್ನುತುಂಬಿ ಮತ್ತೆ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವಂತೆ ಸಂಸ್ಥೆ  ಶ್ರಮವಹಿಸುತ್ತಿದೆ. ಕೇಂದ್ರದಲ್ಲಿರುವವರಿಗೆ ಅವರ ಊಟೋಪಚಾರಕ್ಕೆ ಸಂಬಂಧಪಟ್ಟಂತೆ ಶುಲ್ಕವಿದೆ. ವೈದ್ಯಕೀಯ ಚಿಕಿತ್ಸೆ, ಇನ್ನಿತರ ಉಪಕರಣಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೇವಾ ಭಾರತಿ ಕಾರ್ಯದರ್ಶಿ ಸ್ವರ್ಣಗೌರಿ, ಖಚಾಂಜಿ ಡಿ. ಮಹೇಶ್‍ರಾವ್, ಟ್ರಸ್ಟಿಗಳಾದ ಕುಸುಮಾಕರಗೌಡ, ಕೃಷ್ಣಪ್ಪಗುಡಿಗಾರಇದ್ದರು.

Advertisement

ಸೇವಾಧಾಮದ ವಾರ್ಷಿಕೋತ್ಸವವನ್ನು ಬೆಳಿಗ್ಗೆ 11 ಗಂಟೆಗೆಎಪಿಡಿಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್ಟಿ ಅಬ್ರಾಹಂ ಉದ್ಘಾಟಿಸಲಿದ್ದಾರೆ. ನಾಲ್ಕು ಹೋಂ ಜಿಮ್‍ಗಳಿಗೆ ರಾಮನಗರದ ನವಚೇತನ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಕೆ.ಎಸ್.ಮಂಜುನಾಥ್‍ ಚಾಲನೆ ನೀಡಲಿದ್ದಾರೆ. 20 ಮಂದಿಗೆ ಶಾಸಕ ಹರೀಶ್ ಪೂಂಜ ಗಾಲಿ ಕುರ್ಚಿಗಳನ್ನು ವಿತರಿಸಲಿದ್ದಾರೆ. ಎಂಎಲ್‍ಸಿ ಹರೀಶಕುಮಾರ್, ಬೆಂಗಳೂರಿನ ಚೆಮ್-ಟ್ರೆಂಡ್‍ಕೆಮಿಕಲ್ಸ್ ನ ಮಾರುಕಟ್ಟೆ ಮುಖ್ಯಸ್ಥ ರಾಜೇಶ್ ಫಡ್ಕೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕುಶಲಪ್ಪಗೌಡ ಪೂವಾಜೆ ಅತಿಥಿಗಳಾಗಿರುತ್ತಾರೆ. ಈ ಸಂದರ್ಭ ದ.ಕ. ಮತ್ತುಉಡುಪಿ ಜಿಲ್ಲಾ ಅಂಗವಿಕಲ ಸಂಘದ ಅಧ್ಯಕ್ಷ ಡಾ. ಮುರಲೀಧರ ನಾಯಕ್ ಹಾಗೂ ವಿಶೇಷ ಚೇತನತರಬೇತುದಾರ ಕುಮಾರೇಸನ್‍ ಅವರನ್ನು ಸಮ್ಮಾನಿಸಲಾಗುವುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ
ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ |  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
January 23, 2025
10:41 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror