ಸುಳ್ಯ : ಸುಳ್ಯದ ಕೇರ್ಪಳ ನಿವಾಸಿ ಸಿ. ಸೋಮನಾಥ್ ಅವರಿಗೆ ಕ್ರೀಡೆ(ಕರಾಟೆ) ಮತ್ತು ಯುವಜನಾಂಗ ಸೇವೆಯಲ್ಲಿ ಮಾಡಿದ ವಿಶೇಷ ಸಾಧನೆಗೆ ಇಂಟರ್ ನ್ಯಾಶನಲ್ ಗೋಬ್ಲಲ್ ಪೀಸ್ ಯುನಿವರ್ಸಿಟಿ(ಯು.ಎಸ್.ಎ) ಪಾಂಡಿಚೇರಿಯಲ್ಲಿ ನ.16ರಂದು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.
ಇಂಡಿಯನ್ ಅಕಾಡೆಮಿ ಆಫ್ ಮ್ಯಾರ್‌ಟೈಲ್ ಆರ್ಟ್ಸ್ ಮಂಗಳೂರು ಇದರಿಂದ ತನ್ನ ಕರಾಟೆ ಗುರುಗಳಾದ ಕೆ.ಸಿ ಶಿವಾನಂದ ಅವರಿಂದ ಕರಾಟೆ ಶಿಕ್ಷಣ ಪಡೆದು ಕರಾಟೆಯಲ್ಲಿ ಮೂರನೇ ಡ್ಯಾನ್ ಬ್ಲಾಕ್ ಬೆಲ್ಟ್ ಪದವಿ ಪಡೆದಿದ್ದಾರೆ. ಮಹಾತ್ಮ ಗಾಂಧಿ ಸದ್ಬಾವನಾ ಪ್ರಶಸ್ತಿ, ಭಾರತ ಭೂಷಣ ರಾಜ್ಯ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ಅಂತರಾಜ್ಯ ಕರಾಟೆ ಪ್ರಶಸ್ತಿ ಪಡೆದುಕೊಂಡಿದ್ದು ಕರಾಟೆಯ ರಾಷ್ಟ್ರಮಟ್ಟದ ತೀರ್ಪುಗಾರರಾಗಿದ್ದಾರೆ. ದ.ಕ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 3200ಕ್ಕೂ ಅಧಿಕ ತನ್ನ ಕರಾಟೆ ಪ್ರದರ್ಶನ ನೀಡಿದ್ದಾರೆ. ಸುಳ್ಯ ಮತ್ತು ಪುತ್ತೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚಿನ ಎಲ್ಲಾ ವಿದ್ಯಾರ್ಥಿ ನಿಲಯದಲ್ಲಿ ಉಚಿತ ಕರಾಟೆ ತರಗತಿ ನೀಡಿದ್ದಾರೆ. ಬ್ರೇಕ್ ಡ್ಯಾನ್ಸ್ ಹಾಗು ಪಿಲ್ಮ್ ಡ್ಯಾನ್ಸ್ ಬಲ್ಲವರಾಗಿದ್ದು ಪಿಲ್ಮ್ ಡ್ಯಾನ್ಸ್ನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ವಿಮಾ ಸಲಹೆಗಾರರಾಗಿ ದುಡಿಯುತ್ತಿದ್ದಾರೆ.