ಬೆಳ್ಳಾರೆ: ಚೂಂತಾರು ದಿ|ಕೃಷ್ಣ ಭಟ್ ವತಿಯಿಂದ ನಡೆಯುತ್ತಿದ್ದ 30 ದಿನಗಳ ಸ್ಕಂದಕೃಪಾ ವೇದ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ಹಾಗೂ ಹಿರಿಯ ಪಾಕಶಾಸ್ತ್ರಜ್ಞ ಕೃಷ್ಣಣ್ಣಯ್ಯ ಪಾದೆಯವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ರಾಮಜೋಯಿಸ ಬೆಳ್ಳಾರೆ ಸನ್ಮಾನಿತರನ್ನು ಪರಿಚಯಿಸಿದರು. ಶಿಬಿರದ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಖ್ಯಾತ ವಕೀಲ ಎಂ.ವಿ ಶಂಕರ್ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕೋಟೆ ರಾಧಾಕೃಷ್ಣ, ಪ್ರತಿಷ್ಠಾನದ ಅಧ್ಯಕ್ಷ ಸತ್ಯಶಂಕರ ಭಟ್,ಯೋಗರತ್ನ ಗೋಪಾಲಕೃಷ್ಣ ಭಟ್ ದೇಲಂಪಾಡಿ ಉಪಸ್ಥಿತರಿದ್ದರು.
ವಿದ್ಯಾ ಸರಸ್ವತಿ ಪ್ರಸ್ತಾವನೆಗೈದರು. ವಿವೇಕ್ ಹಾಗೂ ನವೀನ್ ಪ್ರಾರ್ಥಿಸಿದರು. ಶ್ರೀಹರಿ ಸ್ವಾಗತಿಸಿ, ಸ್ಕಂದ ವಂದಿಸಿದರು. ವಸಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel