ಸುಳ್ಯ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಅಕ್ಷರ ದಾಮ್ಲೆ ಇಂಗುಗುಂಡಿಯ ಟಾಸ್ಕ್ ಕೊಟ್ಟಿದ್ದರು. ಇದಕ್ಕೆ ಸ್ನೇಹ ಸೆಕೆಂಡರಿ ಮತ್ತು ಪ್ರೌಢಶಾಲೆಯ 105 ಮಕ್ಕಳೂ ಇಂಗು ಗುಂಡಿ ಮಾಡಿ ಅದರ ಮುಂದೆ ನಿಂತು ಫೊಟೊ ತೆಗೆಸಿ ಕಳಿಸಿದ್ದಾರೆ. ಆ ಫೊಟೊಗಳನ್ನು ಸಂಕಲಿಸಿ ತಯಾರಿಸಿದ ಫ್ಲೆಕ್ಸ್ ನ ಅನಾವರಣವನ್ನು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ನೆರವೇರಿಸಿದರು.
Advertisement
ಪ್ರತಿಯೊಬ್ಬರೂ ಸ್ವತಃ ಮಣ್ಣು ಅಗೆದು ಎರಡು ಘನ ಅಡಿಯ ಇಂಗು ಗುಂಡಿಯನ್ನು ಮನೆಯ ಪರಿಸರದಲ್ಲಿ ಮಾಡಬೇಕು. ಹೀಗೆ ಮಾಡುವುದರಿಂದ ಪರಿಸರದಲ್ಲಿ ನೀರಿನ ಸಂರಕ್ಷಣೆ ಆಗುತ್ತದೆ ಎಂಬ ಉದ್ದೇಶದಿಂದ ಈ ಗುಂಡಿಯನ್ನು ಮಾಡಲಾಗಿದೆ. ಪ್ರತಿಯೊಬ್ಬ ಮಗುವೂ ಇನ್ನೊಂದು ಗುಂಡಿ ಮಾಡಬೇಕಲ್ಲದೆ ತನ್ನ ಹುಟ್ಟುಹಬ್ಬದ ದಿನ ಒಂದು ಗಿಡ ನೆಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಮಹೇಶ್ ಹೇಳಿದರು. ಪ್ಲೆಕ್ಸ್ ಅನಾವರಣದ ಸಂದರ್ಭ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement