ಸ್ವಚ್ಛತಾ ಕಾರ್ಯ ಒಂದು ದಿನದ್ದಲ್ಲ, ಅದು ನಿರಂತರ

Advertisement

ಸುಬ್ರಹ್ಮಣ್ಯ: ಸ್ವಚ್ಛತಾ ಕಾರ್ಯ ಎನ್ನುವುದು ಒಬ್ಬರದ್ದು, ಒಂದು ಸಂಘಟನೆಯದ್ದು ಮಾತ್ರವೇ ಅಲ್ಲ. ಅದು ಎಲ್ಲರ ಜವಾಬ್ದಾರಿ ಹಾಗೂ ಅದು ನಿರಂತರ.. ಹೀಗೆಂದು ಎಚ್ಚರಿಸಿದ್ದು ಎಂದು ರಾಜ್ಯ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಅವರು ಕುಕ್ಕೆಸುಬ್ರಹ್ಮಣ್ಯದಲ್ಲಿ ಎರಡು ದಿನಗಳ ಕಾಲ ಯುವ ಬ್ರಿಗೇಡ್ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆದ #ಕುಮಾರ_ಸಂಸ್ಕಾರ ನದಿ ಸ್ವಚ್ಛತಾ ಆಂದೋಲನದ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಸಮಾಜವು ಯಾವತ್ತೂ ಸಮಾಜಮುಖಿಯಾಗಿ ಯೋಚನೆ ಮಾಡಬೇಕು. ಇದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ.ಯಾವುದೇ ಗ್ರಾಮಗಳ ಅಭಿವೃದ್ಧಿಗೆ ಜಲಮೂಲ ಅತ್ಯಗತ್ಯ.ಜಲಮೂಲದ ನದಿಗಳ ಸಂರಕ್ಷಣೆಗೆ ಯುವ ಜನಾಂಗ ಕಠಿಬದ್ದವಾಗಬೇಕು ಎಂದರು.
ಸ್ವಚ್ಛತಾ ಕಾರ್ಯ ಎನ್ನುವುದು ಒಂದು ದಿನದ್ದು ಆಗಬಾರದು, ಅದು ನಿರಂತರವಾಗಿರಬೇಕು. ಹಾಗಾದಾಗ ನದಿಯನ್ನು ಉಳಿಸಬಹುದು.ಸ್ಥಳಿಯರು ನದಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

Advertisement
Advertisement

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಹೊಸಮನೆ, ಜೇಸಿಸ್ ವಲಯಾಧಿಕಾರಿ ರವಿಕಕ್ಕೆಪದವು, ಗ್ರಾ.ಪಂ.ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಪಿಡಿಓ ಮುತ್ತಪ್ಪ, ನಮ್ಮ ಸುಬ್ರಹ್ಮಣ್ಯ ಯುವ ಬಳಗದ ರಮೇಶ್ ಭಟ್, ಸೂರ್ಯ ಭಟ್, ಅನಂತ ವೇದಿಕೆಯಲ್ಲಿದ್ದರು.ಯುವ ಬ್ರಿಗೇಡ್ ಸದಸ್ಯರು, ಸಹೋದರಿ ನಿವೇದಿತಾ ಪ್ರತಿಷ್ಠಾನದ ಸದಸ್ಯರು, ನಮ್ಮ ಸುಬ್ರಹ್ಮಣ್ಯ ಯುವ ಬಳಗದ ಸದಸ್ಯರು ಮತ್ತು ಇತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸ್ವಚ್ಛತಾ ಕಾರ್ಯ ಒಂದು ದಿನದ್ದಲ್ಲ, ಅದು ನಿರಂತರ"

Leave a comment

Your email address will not be published.


*